Wednesday, June 7, 2023

Latest Posts

ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಕಿ ಭಾಯ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್‌ಗೆ (Salman Khan) ಇತ್ತೀಚಿಗೆ ಏ.30ರೊಳಗೆ ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿತ್ತು. ರಾಕಿ ಭಾಯ್ ಹೆಸರಿನಲ್ಲಿ ಸಲ್ಮಾನ್ ಧಮ್ಕಿ ಹಾಕಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಏಪ್ರಿಲ್ 30ರೊಳಗೆ ಸಲ್ಮಾನ್ ಖಾನ್‌ರನ್ನು ಕೊಲ್ಲುತ್ತೇನೆ ಎಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ತನ್ನನ್ನು ತಾನು ರಾಕಿಭಾಯ್ ಎಂದು ಹೇಳಿಕೊಂಡಿದ್ದ ಈತ 16 ವರ್ಷದ ಹುಡುಗನಾಗಿದ್ದು, ಥಾಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ರಾಜಸ್ಥಾನದ ಜೋಧಪುರದ ನಿವಾಸಿಯಾಗಿರುವ ಈತ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ. ಈತನ ನಂಬರ್ ಅನ್ನು ಟ್ರ್ಯಾಕ್ ಮಾಡಲಾಗಿತ್ತು ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.

ಕರೆ ಮಾಡಿದವರು ಅಪ್ರಾಪ್ತ ವಯಸ್ಸಿನ ಬಾಲಕ. ಇದು ಗಂಭೀರವಾದ ಕರೆಯಾಗಿರಲಿಲ್ಲ. ಆತ ಯಾಕಾಗಿ ಕರೆ ಮಾಡಿದ್ದ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!