ರೋಹಿಣಿ ಸಿಂಧೂರಿ ಖಾಸಗಿ ಫೋಟೊ ಅಪ್ಲೋಡ್: ಸ್ಪಷ್ಟನೆ ನೀಡಿದ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಇದರ ಜತೆಗೆ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ರೀತಿ ರೋಹಿಣಿ ಅವರ ಫೋಟೊಗಳನ್ನು ಹಂಚಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರೂಪ ಅವರು ಖಡಕ್ ಉತ್ತರ ನೀಡಿದ್ದಾರೆ.

ನಾನು ಯಾಕೆ ಫೋಟೊ ಹಾಕಿದ್ದೇನೆ ಎಂದು ಕೇಳುವವರಿಗೆ ನಾನು ಹೇಳೋದು ಇಷ್ಟೆ, ಫೋಟೊ ಕಳಿಸುವಾಕೆಗೆ ಅದರ ದರ್ದು ಇಲ್ಲದ ಮೇಲೆ ಬೇರೆಯವರಿಗೆ ಯಾಕೆ ಇರಬೇಕು? ಈ ರೀತಿ ಫೋಟೊಗಳು ಅವರ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಇಲ್ಲ. ಯಾರು, ಯಾರಿಗೆ ಯಾವ ಉದ್ದೇಶದಿಂದ ಕಳಿಸಿದ್ದಾರೆ ಅನ್ನೋದನ್ನ ಅವರೇ ಹೇಳಲಿ. ಸಂಸಾರದಲ್ಲಿ ಹುಳಿ ಹಿಂಡೋಕೆ ಹೀಗೆ ಮಾಡಿದ್ರಾ? ಒಬ್ಬ ಹೆಣ್ಣಾಗಿ ಅನೇಕ ಹೆಣ್ಣು ಮಕ್ಕಳಿಗೆ ಮುಳ್ಳಾದ ಇವರ ಮೇಲೆ ಕನಿಕರ ಇದೆಯಾ? ನಿಮ್ಮದು ಮಿಸ್‌ಪ್ಲೇಸ್ಡ್ ಸಿಂಪತಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!