Tuesday, August 16, 2022

Latest Posts

ಅಂತಿಮ ಟೆಸ್ಟ್ ಪಂದ್ಯ ರದ್ದು: ಐಪಿಎಲ್ ಗಾಗಿ ದುಬೈಗೆ ಬಂದಿಳಿದ ರೋಹಿತ್​, ಬುಮ್ರಾ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂಗ್ಲೆಂಡ್​ ವಿರುದ್ಧದ ಫೈನಲ್​ ಟೆಸ್ಟ್​ ಪಂದ್ಯ ರದ್ದುಗೊಳ್ಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ಸ್​ ದುಬೈಗೆ ತೆರಳಿದ್ದಾರೆ.
ಮ್ಯಾಂಚೆಸ್ಟರ್​ ಮೈದಾನದಲ್ಲಿ ಆರಂಭಗೊಳ್ಳಬೇಕಾಗಿದ್ದ ಫೈನಲ್​ ಟೆಸ್ಟ್​ ಪಂದ್ಯ ಕೊರೋನಾ ವೈರಸ್​ ಕಾರಣ ರದ್ದುಗೊಂಡಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿನ ಕ್ಯಾಪ್ಟನ್​ ರೋಹಿತ್​ ಶರ್ಮಾ, ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ಹಾಗೂ ಸ್ಫೋಟಕ ಬ್ಯಾಟ್ಸ್​​ಮನ್​ ಸೂರ್ಯಕುಮಾರ್​ ಯಾದವ್​ ವಿಶೇಷ ಚಾರ್ಟರ್​ ವಿಮಾನದಲ್ಲಿ ಆಗಮಿಸಿದ್ದು, ದುಬೈ ತಲುಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋ ರಿಲೀಸ್ ಮಾಡಿರುವ ಮುಂಬೈ ಇಂಡಿಯನ್ಸ್​​​ ತಂಡ ಟ್ವಿಟರ್​ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದೆ.
ಕೆಲ ಗಂಟೆಗಳ ಹಿಂದೆ ದುಬೈಗೆ ಆಗಮಿಸಿರುವ ಪ್ಲೇಯರ್ಸ್​ ಮುಂದಿನ ಆರು ದಿನಗಳ ಕಾಲ ಕ್ವಾರಂಟೈನ್​​ಗೊಳಗಾಗಲಿದ್ದು, ಸೆಪ್ಟೆಂಬರ್​ 19ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss