ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮೊದಲ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾಕ್ಕೆ ಮತ್ತಷ್ಟು ಶಕ್ತಿ ತುಂಬಿಸಿದ್ದು, ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ನ ರೋಹಿತ್ ಶರ್ಮಾ ಅವರ ಶತಕ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಮ್ಯಾಚ್ ನಲ್ಲಿ ರೋಹಿತ್ ಅವರು ಶತಕ ಸಿಡಿಸಿದ್ದು ಸರಣಿಯಲ್ಲಿ ನಮ್ಮ ತಂಡ ಕಮ್ಬ್ಯಾಕ್ ಮಾಡಿದ ಪ್ರಮುಖ ಕ್ಷಣವಾಗಿತ್ತು . ಈ ಮೂಲಕ ಭಾರತದ ಕಡೆಗೆ ಸರಣಿ ತಿರುಗಲು ಕಾರಣವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದಲ್ಲದೆ ಅವರು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನದ ಜೊತೆಗೆ ಕೆಲವು ಪ್ರಮುಖ ಜೊತೆಯಾಟದಲ್ಲೂ ಪಾಲ್ಗೊಂಡರು ಎಂದು ಹಿಟ್ಮ್ಯಾನ್ ಬಗ್ಗೆ ಕೊಹ್ಲಿ ಮೆಚ್ಚುಗೆ ಮಾತನಾಡಿದರು.
ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಸರಣಿಯುದ್ದಕ್ಕೂ ಬೌಲರ್ಗಳು ಹಾಗೂ ಫೀಲ್ಡರ್ಗಳು ಉತ್ತಮ ಪ್ರದರ್ಶನ ನೀಡಿದರು. ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಆಟ ಗೇಮ್ ಚೇಂಜಿಂಗ್ ಕ್ಷಣವಾಗಿತ್ತು ಎಂದು ವಿರಾಟ್ ಹೇಳಿದ್ದಾರೆ. ಆಶ್ವಿನ್ ಕಳೆದ 6-7 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ನಮಗೆ ಬ್ಯಾಂಕರ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.