Wednesday, August 10, 2022

Latest Posts

ಭಾರತ- ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​​ ಪಂದ್ಯ: ಅಮೋಘ ಶತಕ ಸಿಡಿಸಿದ ರೋಹಿತ್ ಶರ್ಮಾ ​

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ- ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​​ ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಅಲ್ಲಿ ಉತ್ತಮ ಆಟವಾಡುತ್ತಿದ್ದು, ರೋಹಿತ್​ ಭರ್ಜರಿ ಶತಕ ಸಿಡಿಸಿದ್ದಾರೆ.
ಇಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಇಂಗ್ಲೆಂಡ್​ ಬೌಲರ್ ಗಳನ್ನು ಕಾಡಿದರು. ಈ ವೇಳೆ ಆರಂಭಿಕ ರಾಹುಲ್ 46 ರನ್ ಗಳಿಸಿ ಔಟಾದರು. ಬಳಿಕ ರೋಹಿತ್​- ಪೂಜಾರ ಜೋಡಿ ಉತ್ತಮ ಜೊತೆಯಾಟವಾಡಿದರು. ರೋಹಿತ್​ ಶರ್ಮಾ ತಮ್ಮ ಬ್ಯಾಟಿಂಗ್ ಬಲದಿಂದ ಆಂಗ್ಲ ಬೌಲರ್ ಗಳನ್ನು ಬೆನ್ನಟ್ಟಿದರು. ಈ ಮೂಲಕ ಅಮೋಘ ಶತಕ ಸಿಡಿಸಿ ಮಿಂಚಿದರು.
ಸದ್ಯ ಭಾರತ ಒಂದು ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದೆ. 100 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ರೋಹಿತ್​ ಶರ್ಮಾ ​ ಹಾಗೂ ಪೂಜಾರ ಇಂಗ್ಲೆಂಡ್​ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ.
ಮೊದಲ ಇನ್ನಿಂಗ್ಸ್​​​ನಲ್ಲಿ ಇಂಗ್ಲೆಂಡ್​ ತಂಡ 290ರನ್​ ಗಳಿಕೆ ಮಾಡುವ ಮೂಲಕ 99 ರನ್​ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 43 ರನ್ ಗಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss