spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟಿ-20 ಬಳಿಕ ಏಕದಿನ ತಂಡಕ್ಕೂ ರೋಹಿತ್​ ಶರ್ಮಾ ಕ್ಯಾಪ್ಟನ್: ಟೆಸ್ಟ್ ನಲ್ಲಿ ಉಪನಾಯಕ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ-20 ಕ್ರಿಕೆಟ್​ ತಂಡದ ನಾಯಕನಾಗಿರುವ ರೋಹಿತ್​ ಶರ್ಮಾಗೆ ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್​ಮ್ಯಾನ್ ಅವರಿಗೆ ಕಪ್ತಾನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್​​ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಟಿ-20 ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್​​ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಅಧಿಕೃತವಾಗಿ ಬಿಸಿಸಿಐ ಮಾಹಿತಿ ಹೊರಹಾಕಿದ್ದು, ಏಕದಿನ ತಂಡದ ನಾಯಕತ್ವದ ಸ್ಥಾನದಿಂದಲೂ ಅವರನ್ನ ಕೆಳಗಿಳಿಸಲಾಗಿದೆ.
ವಿರಾಟ್​ ಕೊಹ್ಲಿ ಇದೀಗ ಟೆಸ್ಟ್​​​ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ. ಇವರ ಉಪನಾಯಕನಾಗಿ ರೋಹಿತ್​ ಶರ್ಮಾ ಸಾಥ್​​ ನೀಡಲಿದ್ದಾರೆ. ಇಷ್ಟು ದಿನ ಟೆಸ್ಟ್​​ನಲ್ಲಿ ಉಪನಾಯಕನಾಗಿದ್ದ ರಹಾನೆಗೆ ಬಿಸಿಸಿಐ ಕೊಕ್​ ನೀಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಡಿಸೆಂಬರ್​​ 26ರಿಂದ ಟೆಸ್ಟ್​​ನಲ್ಲಿ ಭಾಗಿಯಾಗಲಿದ್ದು, ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ 30 ಸೆಂಚುರಿಯನ್ ಸ್ಟೇಡಿಯಂನಲ್ಲಿ, ಎರಡನೇ ಟೆಸ್ಟ್ ಜನವರಿ 3 ರಿಂದ 07 ಜೋಹಾನ್ಸ್​​ಬರ್ಗ್​ನಲ್ಲಿ, ಮೂರನೇ ಟೆಸ್ಟ್ ಜನವರಿ 11 ರಿಂದ 15 ಕೇಪ್ ಟೌನ್​ನಲ್ಲಿ ನಡೆಯಲಿದೆ. ಉಳಿದಂತೆ ಮೊದಲ ಏಕದಿನ ಪಂದ್ಯ ಜನವರಿ 19, 2ನೇ ಏಕದಿನ ಪಂದ್ಯ ಜನವರಿ 21 ಹಾಗೂ 3ನೇ ಏಕದಿನ ಪಂದ್ಯ 23ರಂದು ಜನವರಿ ತಿಂಗಳಲ್ಲಿ ಕೇಪ್ ಟೌನ್​ನಲ್ಲಿ ನಡೆಯಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss