Friday, March 5, 2021

Latest Posts

ಭಾರತದ ಮೈದಾನ ಪಿಚ್ ಬಗ್ಗೆ ವಿದೇಶ ಆಟಗಾರರ ಟೀಕೆಗೆ ರೋಹಿತ್ ಶರ್ಮ ಟಾಂಗ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತವು ತನ್ನ ದೇಶದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ತನಗೆ ಅನುಕೂಲಕರವಾದ ಸ್ಪಿನ್ ಪಿಚ್ ತಯಾರಿಸುತ್ತದೆ ಎಂಬ ಕುರಿತಾದ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡಿರುವ ರೋಹಿತ್ ಶರ್ಮ, ಈ ಪರಿಣತರೆಂಬ ಮಂದಿ ನಮ್ಮ ಆಟದ ಬಗ್ಗೆ, ನಮ್ಮ ಬೌಲಿಂಗ್ ಬಗ್ಗೆ,
ನಮ್ಮ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡಲಿ. ಅದರ ಬದಲಾಗಿ ಪಿಚ್ ಕುರಿತಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.
ಭಾರತವು ವಿದೇಶಗಳಿಗೆ ಹೋದಾಗ ಅಲ್ಲಿನ ತಂಡಗಳು ಅವರಿಗೆ ಅನುಕೂಲಕರ ಪಿಚ್ ತಯಾರಿಸುತ್ತಿದ್ದವು. ನಾವು ಅಲ್ಲಿ ಆಡಲು ಕಷ್ಟ ಪಡುತ್ತಿದ್ದೆವು. ಆದರೆ ಆ ಕುರಿತಂತೆ ನಾವು ಉಸಿರೆತ್ತುತ್ತಿರಲಿಲ್ಲ. ಫಲಿತಾಂಶವನ್ನು ಬಂದಂತೆ ಸ್ವೀಕರಿಸುತ್ತಿದ್ದೆವು. ಆದರೆ ಭಾರತದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾಗಳು ಸೋತಾಗ ಮಾತ್ರ ದೊಡ್ಡ ರಾದ್ಧಾಂತ ಎಬ್ಬಿಸುತ್ತವೆ ಎಂದು ರೋಹಿತ್ ಟೀಕಿಸಿದ್ದಾರೆ.
ಇತ್ತೀಚಿಗೆ ಚೆನ್ನೈ ಟೆಸ್ಟ್ ಭಾರತವು ಗೆದ್ದ ಬಳಿಕ ಮೈಕೆಲ್ ವಾಹನ್, ಮೈಕೆಲ್ ಕ್ಲರ್ಕ್ ಮೊದಲಾದವರು ಅಲ್ಲಿನ ಪಿಚ್ ಪರಿಸ್ಥಿತಿಯನ್ನು ಟೀಕಿಸಿದ್ದರು.
ನಮ್ಮಲ್ಲಿನ ಪಿಚ್ ಕೂಡ ಎರಡೂ ತಂಡಗಳಿಗೆ ಒಂದೇ ರೀತಿಯಾಗಿರುತ್ತವೆ. ಅವರೂ ಅಂತಹ ಪಿಚ್‌ನಲ್ಲಿ ಆಡಲು ಕಲಿಯಬೇಕು ಎಂದು ಅವರು ನುಡಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss