Sunday, June 26, 2022

Latest Posts

ಕಳಪೆ ​ಫಾರ್ಮ್ ನಲ್ಲಿ ರೋಹಿತ್-ಕೊಹ್ಲಿ: ಈ ಕುರಿತು ಗಂಗೂಲಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್ ನಲಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ರೋಹಿತ್ ಶರ್ಮಾ ಹಾಗೂ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡ್ತಿದ್ದು, ಇದೀಗ ಮುಂದಿನ ರಾಷ್ಟ್ರೀಯ ಆಟಗಳಿಗೆ ಇವರ ಕಳಪೆ ಬ್ಯಾಟಿಂಗ್ ಭಾರತೀಯ ಕ್ರಿಕೆಟ್ ಮಂಡಳಿಗೂ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಮಾತನಾಡಿದ ಗಂಗೂಲಿ, ಅವರಿಬ್ಬರೂ ಶ್ರೇಷ್ಠ ಆಟಗಾರರು. ಆದಷ್ಟು ಬೇಗ ಫಾರ್ಮ್​ಗೆ ಮರಳುತ್ತಾರೆಂಬ ವಿಶ್ವಾಸ ನನಗಿದೆ ಎಂದು​ ಹೇಳಿದ್ದಾರೆ. ಶೀಘ್ರದಲ್ಲೇ ಅವರ ಬ್ಯಾಟ್​​ನಿಂದ ಉತ್ತಮ ರನ್​ ಹರಿದು ಬರಲಿದ್ದು, ವಿರಾಟ್​ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇಬ್ಬರು ಪ್ಲೇಯರ್ಸ್​ ಫಾರ್ಮ್​ಗೆ ಮರಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಪಿಎಲ್​​ನಲ್ಲಿ ಆರ್​ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ 9 ಪಂದ್ಯಗಳಿಂದ 16ರ ಸರಾಸರಿಯಲ್ಲಿ ಕೇವಲ 128 ರನ್​ಗಳಿಕೆ ಮಾಡಿದ್ರೆ, ಮುಂಬೈ ಕ್ಯಾಪ್ಟನ್​ ರೋಹಿತ್​​ ಆರಂಭದ 8 ಪಂದ್ಯಗಳಿಂದ 153 ರನ್​ಗಳಿಸಿದ್ದಾರೆ. ಇಬ್ಬರು ಬ್ಯಾಟ್​ನಿಂದ ಈವರೆಗೆ ಒಂದೇ ಒಂದು ಅರ್ಧಶತಕ ಸಿಡಿದಿಲ್ಲ.
ಐಪಿಎಲ್​ ಪಂದ್ಯಗಳನ್ನ ತುಂಬಾ ಹತ್ತಿರದಿಂದ ನಾನು ವೀಕ್ಷಿಸುತ್ತಿದ್ದು, ಹೊಸ ಫ್ರಾಂಚೈಸಿಗಳ ಪ್ರದರ್ಶನದಿಂದ ತುಂಬಾ ಪ್ರಭಾವಿತನಾಗಿದ್ದಾನೆ. ಗುಜರಾತ್​ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ಉತ್ತಮವಾಗಿ ಪ್ರದರ್ಶನ ನೀಡ್ತಿವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss