ವ್ಯರ್ಥವಾಯಿತು ರೋಹಿತ್ ಅಂತಿಮ ಹೋರಾಟ: ಸರಣಿ ಗೆದ್ದ ಬಾಂಗ್ಲಾದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಇಂದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಅಂತಿಮ ಹಂತದಲ್ಲಿ ನಾಯಕ ರೋಹಿತ್ ಶರ್ಮಾ ಬೌಂಡರಿ ಸಿಕ್ಸರ್ ಸಿಡಿಸಿ ಅಬ್ಬರಿಸಿದರೂ ಗೆಲುವು ಸಿಗಲಿಲ್ಲ . ಈ ಮೂಲಕ 3 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕೈಚೆಲ್ಲಿದೆ.

272 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಕೈಬೆರಳಿಗೆ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಆಸ್ಪತ್ರೆ ದಾಖಲಾಗಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಬೇಕಾಯತು. ಈ ಜೋಡಿ ಉತ್ತಮ ಆರಂಭ ನೀಡಲು ವಿಫಲವಾಯಿತು. ವಿರಾಟ್ ಕೊಹ್ಲಿ 5 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶಿಖರ್ ಧವನ್ 8 ರನ್ ಸಿಡಿಸಿ ಔಟಾದರು.

ಬಳಿಕ ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ ಆರಂಭಿಸಿದರು. ಇತ್ತ ವಾಶಿಂಗ್ಟನ್ ಸುಂದರ್ 11 ರನ್ ಸಿಡಿಸಿ ಔಟಾದರು. ಇತ್ತ ಕೆಎಲ್ ರಾಹುಲ್ 14 ರನ್ ಸಿಡಿಸಿ ಔಟಾದರು. 65 ರನ್‌ಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು.

ಇತ್ತ ಅಕ್ಸರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಟೀಂ ಇಂಡಿಯಾದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿತು.  ಅಯ್ಯರ್ 102 ಎಸೆತದಲ್ಲಿ 82 ರನ್ ಸಿಡಿಸಿ ಔಟಾದರು.ಹಾಫ್ ಸೆಂಚುರಿ ಸಿಡಿಸಿದ ಅಕ್ಸರ್ ಪಟೇಲ್ 56 ರನ್ ಸಿಡಿಸಿ ಔಟಾದರು.

ನಂತರ ಬಂದ ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಹಾರ್ ಅಬ್ಬರಿಸಲಿಲ್ಲ. ಆದರೆ ಗಾಯದಿಂದ ಚೇರಿಸಿಕೊಂಡ ನಾಯಕ ರೋಹಿತ್ ಶರ್ಮಾ ಅಂತಿಮ ಹಂತದಲ್ಲಿ ಕಣಕ್ಕಿಳಿದರು.ಮೊಹಮ್ಮದ್ ಸಿರಾಜ್ ಜೊತೆ ಸೇರಿದ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಅಂತಿಮ 6 ಎಸೆತದಲ್ಲಿ ಭಾರತ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. ಮೊದಲ ಎಸತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತ ಬೌಂಡರಿ ಗಟ್ಟಿದರೆ, ಮೂರನೇ ಎಸೆತದಲ್ಲಿ ಮತ್ತೊಂದು ಫೋರ್. ಆದರೆ ನಾಲ್ಕನೇ ಎಸೆತದಲ್ಲಿ ನೋ ರನ್. ಅಂತಿಮ 2 ಎಸೆತದಲ್ಲಿ 12 ರನ್ ಅವಶ್ಯಕತೆ ಇತ್ತು. 5ನೇ ಸಿಕ್ಸರ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ ಯಾವುದೇ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಭಾರತ 5 ರನ್ ಸೋಲು ಕಂಡಿತು. ರೋಹಿತ್ 21 ಎಸೆದಲ್ಲಿ 58 ರನ್ ಸಿಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!