ರೋಣ: ರೈತರ ನೆರವಿಗೆ ಬರಲಿದೆ ‘ಕೃಷಿ ಸಂಜೀವಿನಿ’ ವಾಹನ

ಹೊಸದಿಗಂತ ವರದಿ, ರೋಣ:
ರಾಜ್ಯ ಸರಕಾರ ಕೃಷಿಯಲ್ಲಿ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಕೃಷಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಗೆ ಶಾಸಕ ಕಳಕಪ್ಪ ಬಂಡಿ ಜು.8ರಂದು ತಾಲೂಕಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಇಲಾಖೆ  ಮಾಹಿತಿ ನೀಡಿದೆ.
ರೈತರಿಗೆ ನೆರವಾಗಬೇಕು ಎಂಬ ಮಹತ್ವದ ಉದ್ದೇಶದಿಂದ ಸುಸಜ್ಜಿತ ವಾಹನವನ್ನು ಇಲಾಖೆಗಳಿಗೆ ನೀಡಿದೆ. ಈ ವಾಹನವನ್ನು ಸಂಪರ್ಕಿಸಲು 155313 ಎಂಬ ಸಹಾಯವಾಣಿಯನ್ನು ನೀಡಿ ರೈತರಿಗೆ ಉಚಿತವಾಗಿ ಕರೆ ಮಾಡಲು ಸಹ ರಾಜ್ಯ ಸರಕಾರ ಸೂಚಿಸಿದೆ. ಈ ವಾಹನದಲ್ಲಿ ಮೂರು ಜನ ಸಿಬ್ಬಂದಿ ಇದ್ದು, ಕರೆ ಬಂದ ತಕ್ಷಣ ಅಗತ್ಯ ಮಾಹಿತಿ ಪಡೆದು ರೈತನ ಜಮೀನಿನ ಬಳಿ ಅಥವಾ ಗ್ರಾಮಕ್ಕೆ ತೆರಳಲಿದೆ.
ಪ್ರಯೋಗಾಲಯ:
ಇನ್ನು ಈ ವಾಹನ ಪ್ರಯೋಗಾಲಯವನ್ನು ಹೊಂದಿದ್ದು ವಾಹನದಲ್ಲಿ ಜಮೀನಿನ ಮಣ್ಣು ಪರೀಕ್ಷೆ ಕೂಡ ನಡೆಸಲಾಗುತ್ತದೆ. ಹಾಗೆ ಜಮೀನುಗಳಲ್ಲಿ ಬೆಳೆದ ಬೆಳೆಗೆ ರೋಗ ಅಂಟಿಕೊಂಡಿದ್ದರೆ ವಾಹನದಲ್ಲಿರುವ ಸಿಬ್ಬಂದಿ ಬೆಳೆಗೆ ಯಾವ ಔಷಧಿಯನ್ನು ಸಿಂಪರಣೆ ಮಾಡಬೇಕು ಎಂಬ ವಿಷಯವನ್ನು ಸಹ ತಿಳಿಸಲಿದ್ದಾರೆ. ಮುಖ್ಯವಾಗಿ ರೈತರಿರುವ ಸ್ಥಳಕ್ಕೆ ಧಾವಿಸಿ ಅಗತ್ಯ ಮಾಹಿತಿ ನೀಡುವುದರಿಂದ ರೈತನಿಗೆ ಅನುಕೂಲವಾಗಲಿದೆ. ಅಲ್ಲದೇ, ರೈತರಿಗೆ ಸಿಬ್ಬಂದಿ ನೀಡುವ ಮಾಹಿತಿ ಅರ್ಥವಾಗದಿದ್ದರೆ ವಾಹನದಲ್ಲಿ ಅಳವಡಿಸಲಾದ ಟಿವಿ ಪರದೆ ಮೂಲಕ ಮಾಹಿತಿ ಅಂಚಿಕೊಳ್ಳುವ ವ್ಯವಸ್ಥೆಯನ್ನು ಸರಕಾರ ಮಾಡಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!