ನವಜಾತ ಗಂಡುಮಗುವನ್ನು ಕಳೆದುಕೊಂಡ ರೊನಾಲ್ಡೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ನವಜಾತ ಗಂಡುಮಗುವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋರ್ಚುಗಲ್‌ ಆಟಗಾರ ರೊನಾಲ್ಡೋ ತಮ್ಮ ಗಂಡುಮಗುವಿನ ಸಾವಿನ ಸುದ್ದಿ ತಿಳಿಸಲು ವಿಷಾದವಾಗುತ್ತದೆ. ಒಬ್ಬ ಪಾಲಕನಿಗೆ ಬರಬಹುದಾದ ಅತಿ ದೊಡ್ಡ ದುಃಖ ಇದು ಎಂದಿದ್ದಾರೆ.

ನಾವು ಅವಳಿ ಶಿಶುಗಳ ನಿರೀಕ್ಷೆಯಲ್ಲಿದ್ದೇವೆ ಎಂದು ರೊನಾಲ್ಡೋ ಕಳೆದ ವರ್ಷ ತಮ್ಮ ಗೆಳತಿ ಜಾರ್ಜೀನಾರೊಂದಿಗೆ ಹಂಚಿಕೊಂಡಿದ್ದರು. ಈಗ ಹುಟ್ಟಿದ ಗಂಡುಮಗುವನ್ನು ಕಳೆದುಕೊಂಡಿರುವ ಅವರು ಹೆಣ್ಣುಮಗುವಿನ ಜನನವು ಆ ದುಃಖವನ್ನು ಮರೆಮಾಚಿದೆ ಎಂದಿದ್ದಾರೆ. ರೊನಾಲ್ಡೋ-ಜಾರ್ಜೀನಾ ದಂಪತಿಗಳಿಗೆ ನಾಲ್ಕು ವರ್ಷದ ಇನ್ನೊಬ್ಬ ಮಗಳು ಸೇರಿದಂತೆ ಒಟ್ಟೂ ನಾಲ್ವರು ಮಕ್ಕಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!