ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ ರಾಸ್​ ಟೇಲರ್: ಗಾರ್ಡ್​ ಆಫ್​ ಆನರ್​ ಗೌರವ ಸಲ್ಲಿಸಿದ ನೆದರ್​ಲ್ಯಾಂಡ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನ್ಯೂಜಿಲ್ಯಾಂಡ್​ನ ಹಿರಿಯ ಆಟಗಾರ ರಾಸ್​ ಟೇಲರ್​ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ 14 ರನ್​ ಗಳಿಸಿ ಔಟಾಗುವ ಮೂಲಕ 16 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ನೆದರ್​ಲ್ಯಾಂಡ್​ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯ ರಾಸ್​ ಟೇಲರ್​ಗೆ ಕೊನೆಯ ವಿದಾಯ ಪಂದ್ಯ ಆಡಿದರು. ಮೈದಾನಕ್ಕಿಳಿದ ರಾಸ್​ ಟೇಲರ್​ಗೆ ನೆದರ್​ಲ್ಯಾಂಡ್​ ಆಟಗಾರರು ಚಪ್ಪಾಳೆ ತಟ್ಟಿ ‘ಗಾರ್ಡ್​ ಆಫ್​ ಆನರ್​ ಗೌರವ ಸಲ್ಲಿಸಿದರು.
38 ವರ್ಷ ವಯಸ್ಸಿನ ರಾಸ್​ ಟೇಲರ್​ಗೆ ನೆದರ್​ಲ್ಯಾಂಡ್​ ವಿರುದ್ಧದ ಪಂದ್ಯ 450 ನೇ ಏಕದಿನ ಪಂದ್ಯವಾಗಿದೆ.
ಕಳೆದ ವರ್ಷ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಕ್ರಿಕೆಟ್​ಗೆ ವಿದಾಯ ಘೋಷಿಸಿದ ರಾಸ್​ ಟೇಲರ್​, ತಮ್ಮ ಕೊನೆಯ ಪಂದ್ಯವನ್ನು ತವರು ಮೈದಾನವಾದ ಸೆಡನ್​ ಪಾರ್ಕ್​ನಲ್ಲಿ ಆಡಲು ಬಯಸಿದ್ದರು. ಅದರಂತೆ ನೆದರ್​ಲ್ಯಾಂಡ್​ ವಿರುದ್ಧದ 3 ನೇ ಏಕದಿನದಲ್ಲಿ ಆಡುವ ಮೂಲಕ ಕ್ರಿಕೆಟ್​ಗೆ ಭಾವಪೂರ್ಣ ವಿದಾಯ ಹೇಳಿದರು.
ಪಂದ್ಯ ಮುಕ್ತಾಯದ ಬಳಿಕ ವಿದಾಯ ಭಾಷಣ ಮಾಡಿದ ರಾಸ್​, ದೇಶಕ್ಕಾಗಿ ನನ್ನೆಲ್ಲಾ ಪ್ರಯತ್ನ ಮೀರಿ ಆಟವಾಡಿದ್ದೇನೆ. ನನ್ನ ಸಾಮರ್ಥ್ಯ ಮೀರಿ ಕಠಿಣ ಸಂದರ್ಭದಲ್ಲೂ ದೇಶವನ್ನು ಪ್ರತಿನಿಧಿಸಿದ್ದೇನೆ. ಆ ಗೌರವ, ಹೆಮ್ಮೆ ನನಗಿದೆ. ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.
2006 ರಲ್ಲಿ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿರುವ ರಾಸ್​​ ಟೇಲರ್​ , ಅದರ ನಂತರದ ವರ್ಷದಲ್ಲಿ ಟೆಸ್ಟ್​ ಆಡಿದರು. ರಾಸ್​ ಟೇಲರ್​ ಈವರೆಗೂ 112 ಟೆಸ್ಟ್‌ಗಳನ್ನು ಆಡಿದ್ದು, 19 ಶತಕಗಳು ಸೇರಿದಂತೆ 7,683 ರನ್ ಗಳಿಸಿದ್ದಾರೆ. 236 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 8,593 ರನ್ ಗಳಿಸಿದ್ದಾರೆ. 102 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,909 ರನ್ ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!