ಆರ್​ಆರ್​ಆರ್​ ಸಿನಿಮಾದಲ್ಲಿ ಅಭಿನಯಿಸಿದ ರೇ ಸ್ಟೀವನ್​ಸನ್​ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ಕರ್ ಪ್ರಶಸ್ತಿ ವಿಜೇತ ಆರ್​ಆರ್​ಆರ್​ ಸಿನಿಮಾದಲ್ಲಿ ಖಡಕ್​ ಬ್ರಿಟಷ್​ ಅಧಿಕಾರಿಯಾಗಿ ನಟಿಸಿದ್ದ ರೇ ಸ್ಟೀವನ್​ಸನ್​ ಅವರು 58 ನೇ ವಯಸ್ಸಿನಲ್ಲಿ ಇಟಲಿಯಲ್ಲಿ ಮೃತಪಟ್ಟಿದ್ದಾರೆ.

ಆರ್​ಆರ್​ಆರ್​ ಸಿನಿಮಾ ತಂಡ ಈ ಕುರಿತು ತನ್ನ ಟ್ವಿಟರ್​ ಖಾತೆಯಲ್ಲಿ ಸಂತಾಪ ಸೂಚಿಸಿದೆ. ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ನಿರ್ದೇಶಕ ಎಸ್.ಎಸ್‌.ರಾಜಮೌಳಿ ಆ್ಯಕ್ಷನ್​ ಕಟ್​ನಲ್ಲಿ ಮೂಡಿಬಂದ ಆರ್​ಆರ್​ಆರ್​ ಸಿನಿಮಾದಲ್ಲಿ ಸ್ಟೀವನ್​ಸನ್​ ಬ್ರಿಟಿಷ್​ ಅಧಿಕಾರಿ ಪಾತ್ರ ಪೋಷಣೆ ಮಾಡಿದ್ದರು. ಅವರ ಅಭಿನಯಕ್ಕಾಗಿ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದಲ್ಲಿ ಖಳ ನಾಯಕನ ಪಾತ್ರದ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಅವರು ಪದಾರ್ಪಣೆ ಮಾಡಿದ್ದರು.

ಉತ್ತಮ ನಟರಾಗಿದ್ದ ಸ್ಟೀವನ್​ಸನ್ ಅವರು, ಮಾರ್ವೆಲ್‌ನ ‘ಥಾರ್’ ಸರಣಿಯಲ್ಲಿ ವೋಲ್ಟಾಗ್​, ‘ವೈಕಿಂಗ್ಸ್’ ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅನಿಮೇಟೆಡ್ ಸ್ಟಾರ್ ವಾರ್ಸ್ ಸರಣಿಯಾದ ‘ದಿ ಕ್ಲೋನ್ ವಾರ್ಸ್’ ಮತ್ತು ‘ರೆಬೆಲ್ಸ್’ನಲ್ಲಿ ಗಾರ್ ಸ್ಯಾಕ್ಸನ್‌ಗೆ ಧ್ವನಿ ಕೂಡ ನೀಡಿದ್ದರು. ಡಿಸ್ನಿ+ ನಲ್ಲಿ ಮುಂಬರುವ ‘ದಿ ಮ್ಯಾಂಡಲೋರಿಯನ್ ಸ್ಪಿನ್‌ಆಫ್ ಅಶೋಕಾ’ದಲ್ಲಿ ರೊಸಾರಿಯೊ ಡಾಸನ್‌ ಪಾತ್ರದಲ್ಲಿ ಅವರು ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!