ಜಪಾನ್‌ನಲ್ಲಿ RRR ಅಬ್ಬರ: 1 ಬಿಲಿಯನ್ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಚಿತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಅಭಿನಯದ RRR ಸಿನಿಮಾದ ಫೇಮಸ್ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇಂದು ಜಪಾನ್‌ನಲ್ಲಿ 1 ಬಿಲಿಯನ್ ದಾಟುವ ಮೂಲಕ ಇತಿಹಾಸವನ್ನು ನಿರ್ಮಿಸಲಿದೆ.

ಬಿಡುಗಡೆಯಾದ 122ನೇ ದಿನದಲ್ಲಿ ಚಿತ್ರವು ಐತಿಹಾಸಿಕ ಮಾನದಂಡವನ್ನು ಮೀರಿಸಿದೆ. ಇದು ಜಪಾನ್ ದೇಶದಲ್ಲಿ ಮೈಲಿಗಲ್ಲನ್ನು ಸಾಧಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ.

ಈ ಹಿಂದೆ ಮುತ್ತು ಸಿನಿಮಾ ಎರಡು ದಶಕಗಳಿಗೂ ಹೆಚ್ಚು ಕಾಲ JPY 400 ಮಿಲಿಯನ್‌ನೊಂದಿಗೆ ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಚಲನಚಿತ್ರವಾಗಿತ್ತು.

RRR 46ನೇ ಜಪಾನ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಯಲ್ಲಿ ಗೌರವಾನ್ವಿತ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!