ಆಸ್ಕರ್‌ ಪ್ರಶಸ್ತಿಗೆ ಆರ್‌ಆರ್‌ಆರ್‌ ನ ನಾಟು ನಾಟು ಹಾಡು ನಾಮನಿರ್ದೇಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕಂಡ ಅತ್ಯುತ್ತಮ ಸಿನಿಮಾ ಆರ್‌ಆರ್‌ಆರ್‌ ನ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಯಾಗಿ ಆಸ್ಕರ್‌ ಪ್ರಶಸ್ತಿಗೆ (Oscars 2023 Nominations) ನಾಮನಿರ್ದೇಶನಗೊಂಡಿವೆ.

ಇದರ ಜೊತೆಗೆ ಭಾರತದ ಒಂದು ಸಾಕ್ಷ್ಯ ಚಿತ್ರ ಹಾಗೂ ಕಿರು ಚಿತ್ರವು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.
ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ (Best Documentary Feature Film) ಆಲ್‌ ದಿ ಬ್ರೆತ್ಸ್‌ (All The Breathes) ನಾಮಿನೇಟ್‌ ಆಗಿದೆ. ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ (Best Short Documentary) ದಿ ಎಲಿಫೆಂಟ್‌ ವಿಸ್ಪರರ್ಸ್ (The Elephant Whisperers) ನಾಮನಿರ್ದೇಶನಗೊಂಡಿದೆ.

ನಾಮಿನೇಷನ್‌ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ಆಯ್ಕೆಯಾದ ಸಿನಿಮಾಗಳ ಘೋಷಣೆಯನ್ನು ಮಾರ್ಚ್‌ ತಿಂಗಳ 12ನೇ ತಾರೀಖಿನಂದು ನಡೆಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!