Saturday, August 13, 2022

Latest Posts

ಮಾಡೆಲ್‌ಗೆ ಕೆಟ್ಟ ಹೇರ್‌ಸ್ಟೈಲ್ ಮಾಡಿದವರಿಗೆ ಬಿತ್ತು 2 ಕೋಟಿ ರೂ. ದಂಡ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತನ್ನ ಉದ್ದ ಕೂದಲಿನಿಂದ ಕೂದಲು ಉತ್ಪನ್ನಗಳಿಗೆ ಮಾಡೆಲ್‌ ಆಗಿದ್ದವರ ತಲೆಕೂದಲನ್ನು ಹೇಗೆ ಬೇಕೋ ಹಾಗೆ ಕತ್ತರಿಸಿದರೆ ಏನಾಗುತ್ತದೆ?
ಎರಡು ಕೋಟಿ ರೂ. ದಂಡ ತೆತ್ತಬೇಕಾಗುತ್ತದೆ.
ಹೌದು, ಐಟಿಸಿ ಮೌರ್ಯ ಸಲೂನ್‌ನಲ್ಲಿ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕೆಟ್ಟ ಹೇರ್‌ಕಟ್‌ನಿಂದಾಗಿ ಮಹಿಳೆಯ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡಿದೆ.
ರೂಪದರ್ಶಿಗೆ ಎರಡು ಕೋಟಿ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಈ ಬಗ್ಗೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್ ಮತ್ತು ಸದಸ್ಯ ಎಸ್. ಎಂ. ಕಾಂತಿಕರ್ ಅವರಿದ್ದ ಪೀಠ ತೀರ್ಮಾನ ಕೈಗೊಂಡಿದ್ದು, ಮಹಿಳೆಯರು ತಮ್ಮ ಕೂದಲಿನ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅದಕ್ಕಾಗಿ ಹಣ ಖರ್ಚು ಮಾಡುತ್ತಾರೆ ಎಂದಿದ್ದಾರೆ.
ದೂರುದಾರೆ ಆಶ್ನಾ ರಾಯ್‌ಗೆ ಎರಡು ಕೋಟಿ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಪ್ರತಿವಾದಿಯು ಅವರ ಕೂದಲು ಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣರಾಗಿದ್ದಾರೆ. ನೆತ್ತಿ ಸುಟ್ಟುಹೋಗಿದ್ದು, ಚಿಕಿತ್ಸಾ ದೋಷದಿಂದ ಅಲರ್ಜಿ, ತುರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಕೂದಲು ಕಳೆದುಕೊಂಡ ಆಶ್ನಾ ಮಾನಸಿಕವಾಗಿ ಘಾಸಿಗೊಂಡಿದ್ದು, ಆಕೆಯ ಕೆಲಸವೂ ಹೋಗಿದೆ. ಕೂದಲನ್ನು ಕತ್ತರಿಸಿದ ಕಾರಣ ಪ್ರಾಜೆಕ್ಟ್‌ಗಳು ಕೈ ತಪ್ಪಿವೆ. ಮನೆಯಿಂದ ಹೊರಹೋಗದ ಪರಿಸ್ಥಿತಿಯನ್ನು ಅವರು ಅನುಭವಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss