ಮಳೆಯಿಂದ‌ ಮನೆ ಕಳೆದುಕೊಂಡವರಿಗೆ 5 ಲಕ್ಷ‌ ರೂ.ಪರಿಹಾರ

ಹೊಸದಿಗಂತ ವರದಿ, ಮಡಿಕೇರಿ:

ಪ್ರಕೃತಿ ವಿಕೋಪದಿಂದ ಮನೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಅಲ್ಪ ಪ್ರಮಾಣದ ಹಾನಿ ಸಂಭವಿಸಿದಲ್ಲಿ 50ಸಾವಿರ ರೂ.ಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು, ತಾನು ಬೆಂಗಳೂರಿಗೆ ಮರಳಿದ ತಕ್ಷಣ ಈ ಸಂಬಂಧ ಆದೇಶ ಹೊರಡಿಸುವುದಾಗಿ ನುಡಿದರು.
ಭೂಕಂಪನಕ್ಕೆ ಒಳಗಾಗಿದ್ದ ಚೆಂಬು ಗ್ರಾಮಕ್ಕೆ ಭೇಟಿ ನೀಡಿ, ಬರೆ ಕುಸಿದು ಹಾನಿಯಾಗಿರುವ ಅಕ್ಕಮ್ಮ ಅವರ ಮನೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಅಕ್ಕಮ್ಮ ಅವರಿಗೆ 24ಸಾವಿರ ರೂ.ಗಳ ಚೆಕ್ ನೀಡಿದ ಸಚಿವರು, ಪೂರ್ತಿ ಮನೆ ಬಿದ್ದ ಕುಟುಂಬಕ್ಕೆ 5 ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ಪರಿಹಾರ ನೀಡುವಂತೆ ಮಳೆಯಿಂದ ಹಾನಿಯಾದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರಲ್ಲದೆ, ಬೆಂಗಳೂರಿಗೆ ತೆರಳಿದ ತಕ್ಷಣ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದಾಗಿ ನುಡಿದರು.
ಪೃಕೃತಿ ವಿಕೋಪದಡಿ ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಮನೆಗೆ ಹಾನಿಯಾದವರಿಗೆ ಸೂಕ್ತ ಪರಿಹಾರ ಕೊಡಲಾಗುವುದು ಎಂದರು.
ಹೋಂಸ್ಟೇ ಗಳ ಮೇಲೆ ನಿಗಾ: ನೀತಿ‌ ನಿಯಮ ಇಲ್ಲದೆ ಅಕ್ರಮವಾಗಿ ಕಾರ್ಯ ನಿರ್ವಹಿಸುವ ಹೋಂ ಸ್ಟೇ ಗಳ ಮೇಲೆ ನಿಗಾ ಇರಿಸಲಾಗುವುದು ಮತ್ತು ಪರಿಸರಕ್ಕೆ ಪೂರಕವಾಗಿ ಹೋಂ ಸ್ಟೇ, ರೆಸಾರ್ಟ್ ಉದ್ಯಮ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ವರದಿ ಆಧಾರದಲ್ಲಿ ಅಭಿವೃದ್ಧಿ: ಕಳೆದ ಬಾರಿ ಭೂಕುಸಿತ ಸಂಭವಿಸಿದಾಗ ಮುಂದಿನ ಕ್ರಮಗಳ ಬಗ್ಗೆ ತಜ್ಞರದ ವರದಿ ಪಡೆಯಲಾಗಿದ್ದು, ಆ ವರದಿ ಆಧರಿಸಿಯೇ ಕೊಡಗಿನಲ್ಲಿ ಅಭಿವೃದ್ಧಿ ಮಾಡಬೇಕು‌. ಪ್ರಕೃತಿಗೆ ವಿರುದ್ಧವಾಗಿ ಯಾರೂ ಕೂಡಾ ಹೋಗಬಾರದು, ಹೋದರೆ ಅನಾಹುತ ತಪ್ಪಿದ್ದಲ್ಲ ಎಂದೂ ಸಚಿವರು ಎಚ್ಚರಿಸಿದರು.
ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!