ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್‌ನ ಡಾರ್ಫರ್ ಪ್ರದೇಶದ ನಿರಾಶ್ರಿತ ಶಿಬಿರಗಳ ಮೇಲೆ ಅರೆಸೈನಿಕ ಗುಂಪು (RSF) ದಾಳಿ ನಡೆಸಿ 100 ಕ್ಕೂ ಹೆಚ್ಚು ಜನರನ್ನು ಕೊಂದಿದೆ.
ಈ ಕುರಿತು ವಿಶ್ವಸಂಸ್ಥೆಯಲ್ಲಿ ಸುಡಾನ್‌ನ ಮಾನವೀಯ ಸಂಯೋಜಕರಾದ ಕ್ಲೆಮೆಂಟೈನ್ ನ್ಕ್ವೆಟಾ-ಸಲ್ಮಿ ಪ್ರತಿಕ್ರಿಯೆ ನೀಡಿ, ಈ ದಾಳಿಯನ್ನು ಆರ್‌ಎಸ್‌ಎಫ್ ಮತ್ತು ಅವರ ಮಿತ್ರ ಹೋರಾಟಗಾರರು ನಡೆಸಿದ್ದು, ಈ ದಾಳಿಯಲ್ಲಿ 20 ಮಕ್ಕಳು ಮತ್ತು 9 ಪರಿಹಾರ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಆರ್‌ಎಸ್‌ಎಫ್ ತನ್ನ ವಿರುದ್ಧದ ದೌರ್ಜನ್ಯದ ಆರೋಪಗಳನ್ನು, ತಿರಸ್ಕರಿಸಿದೆ. ಹಾಗೂ ಈ ಆರೋಪಗಳನ್ನು ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳಿದೆ.
ಸುಡಾನ್‌ನಲ್ಲಿ ಎರಡು ವರ್ಷಗಳ ಹಿಂದೆ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ ಸೇನೆ ಮತ್ತು ಆರ್‌ಎಸ್‌ಎಫ್ (ಕ್ಷಿಪ್ರ ಬೆಂಬಲ ಪಡೆಗಳು) ನಡುವಿನ ಹೋರಾಟ ನಡೆಯುತ್ತಿದೆ. ಈ ಸಂಘರ್ಷವು 24,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.