ಆರೆಸ್ಸೆಸ್ ಜನ್ಮಶತಾಬ್ದಿ ಸಂಭ್ರಮ: ಯಾದಗಿರಿಯಲ್ಲಿ ವೈಭವದ ಪಥಸಂಚಲನ

ಹೊಸದಿಗಂತ ವರದಿ ಯಾದಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನ್ಮ ಶತಾಬ್ಧಿ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮ‌ ಅತ್ಯಂತ ವೈಭವದಿಂದ‌ ಜರುಗಿತು. ಇಲ್ಲಿನ‌ ಮುದ್ನಾಳ್ ಲೇಔಟ್ ನಿಂದ ಆರಂಭಗೊಂಡ ಪಥಸಂಚಲನ ಸ್ವಾಮಿ ವಿವೇಕಾನಂದ ಬಡಾವಣೆ, ಹೊಸ ಬಸ್ ನಿಲ್ದಾಣದ ಮೂಲಕ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಮಾರ್ಗವಾಗಿ ಸಮಾವೇಶಗೊಂಡಿತು. ರಾಷ್ಟ್ರಪ್ರೇಮದ ಧ್ಯೋತಕವಾಗಿರುವ ಸಂಘದ ನೂರನೇ ವರ್ಷಾಚರಣೆಯಲ್ಲಿ ಪಥಸಂಚಲನವನ್ನು‌ ಗಿರಿ ನಗರದ ಜನತೆ ಕಣ್ತುಂಬಿಕೊಂಡರು. ಗಣವೇಷದಲ್ಲಿನ ಸಾವಿರಾರು ಯುವಕರು ಬ್ಯಾಂಡ್, ವಾದ್ಯಗಳ ಸದ್ದಿಗೆ ತಕ್ಕಂತೆ ಮುಂದಡಿ ಇಡುತ್ತಿದ್ದರು. … Continue reading ಆರೆಸ್ಸೆಸ್ ಜನ್ಮಶತಾಬ್ದಿ ಸಂಭ್ರಮ: ಯಾದಗಿರಿಯಲ್ಲಿ ವೈಭವದ ಪಥಸಂಚಲನ