ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ- ಎಸ್ ಡಿಪಿಐ ಕಾರಣ ಎಂದು ಆರೋಪಿಸಿದೆ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇರಳದ ಪಾಲಕ್ಕಾಡ್ ಪಟ್ಟಣದ ಮೇಲಮುರಿ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಘಟನೆಯ ಕಾರ್ಯಕರ್ತರೊಬ್ಬರನ್ನು ಶನಿವಾರ ಹಾಡಹಗಲೇ ಹತ್ಯೆ ಮಾಡಲಾಗಿದೆ.
ಮೂರು ಬೈಕ್‌ಗಳಲ್ಲಿ ಬಂದ ಐವರು ದುಷ್ಕರ್ಮಿಗಳಿದ್ದ ತಂಡವು ಸ್ವಯಂಸೇವಕ ಸಂಘದ ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದೆ. ಮೇಲಮುರಿಯಲ್ಲಿರುವ ಶ್ರೀನಿವಾಸನ್‌ ಅವರ ಅಂಗಡಿಯೊಳಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಶ್ರೀನಿವಾಸನ್‌ ಅವರು ಈ ಹಿಂದೆ ಸಂಘದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ರೀನಿವಾಸನ್ ಅವರಿಗೆ ಸೇರಿದ ಅಂಗಡಿ, ಆಟೋಗಳ ಮೇಲೆಯೂ ದಾಳಿ ನಡೆದಿದೆ.
ಈ ಹತ್ಯಾಕಾಂಡದ ಹಿಂದೆ ಎಸ್‌ಡಿಪಿಐ ಸಂಘಟನೆಯ ನೇರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಈ ಕುರಿತು ಟ್ವಿಟ್‌ ಮಾಡಿದದ್ದು, ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪಾಪ್ಯುಲರ್ ಫ್ರಂಟ್ ನ ಭಯೋತ್ಪಾದಕರು ಹಾಡಹಗಲೇ ಆರೆಸ್ಸೆಸ್ ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಎಡಪಕ್ಷ ಹಾಗೂ ಜಿಹಾದಿ ಭಯೋತ್ಪಾದನೆಯು ಕೇರಳವನ್ನು ಆಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಾಂಧರ ದಾಳಿಗೆ ನಮ್ಮ 23 ಕಾರ್ಯಕರ್ತರು ಬಲಿಯಾಗಿದ್ದಾರೆ ಎಂದು ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!