ಸಿಪಿಎಂ ಕಾರ್ಯಕರ್ತರ ಹತ್ಯೆ ಆರೋಪದಿಂದ ಮುಕ್ತರಾದ ಆರೆಸ್ಸೆಸ್‌ ಕಾರ್ಯಕರ್ತರು: ಕೇರಳ ಹೈ ಕೋರ್ಟ್‌ ಹೇಳಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೇರಳದಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್‌ ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 13 ಆರೆಸ್ಸೆಸ್‌ ಕಾರ್ಯಕರ್ತರನ್ನು ಕೇರಳ ಹೈಕೋರ್ಟ್‌ ಆರೋಪ ಮುಕ್ತರನ್ನಾಗಿಸಿದೆ. ಅವರ ಮೇಲಿನ ಆರೋಪವು ಕೃತಕವಾಗಿ ಸೃಷ್ಟಿಸಲ್ಪಟ್ಟಿದ್ದು ಎಂದಿರುವ ಉಚ್ಛ ನ್ಯಾಯಾಲಯವು ಸ್ಥಳೀಯ ಕೋರ್ಟ್‌ ನೀಡಿರುವ ಜೀವಾವಧಿ ಶಿಕ್ಷೆಯ ತೀರ್ಪನ್ನು ತಡೆಹಿಡಿದು ಅವರನ್ನು ಖುಲಾಸೆಗೊಳಿಸಿದೆ.

ಖುಲಾಸೆಗೊಳಸಿರುವ ಹೈಕೋರ್ಟ್‌ ತೀರ್ಪಿನ ಸಾರಾಂಶ ಇಲ್ಲಿದೆ:

  • ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಏನು ಹೇಳಬೇಕು ಎಂದು ಕಲಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ ವ್ಯವಸ್ಥಿತವಾದ ಸ್ಕ್ರಿಪ್ಟ್‌ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಇದರಲ್ಲಿ ಎಳ್ಳಷ್ಟೂ ಪ್ರಯೋಜನಕ್ಕೆ ಬರಬಹುದಾದ ಆಧಾರಗಳಿಲ್ಲ.
  • ಸಾಕ್ಷಿದಾರರೆಲ್ಲರೂ ಸ್ಪಷ್ಟವಾಗಿ ಬೋಧಿಸಲ್ಪಟ್ಟಿದ್ದಾರೆ ಎಂಬುದನ್ನು ಹೈಕೋರ್ಟ್‌ ಕಂಡುಹಿಡಿದಿದೆ, ಆದ್ದರಿಂದ ಏನಾಯಿತು ಎಂಬುದರ ಕುರಿತು ಕೋರ್ಟ್‌ ತಿಳಿದುಕೊಳ್ಳಬಯಸಿದೆ.
  • ತನಿಖೆಯ ಆರಂಭದಿಂದಲೂ, ಪ್ರಕರಣವನ್ನು ನಿರ್ದಿಷ್ಟ ರೀತಿಯಲ್ಲಿ ರೂಪಿಸುವ ಸಲುವಾಗಿ ಅರ್ಧ-ಸತ್ಯಗಳನ್ನು ಹಾಗೂ ಆಯ್ದ ಸಾಕ್ಷಿಗಳನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗಿದೆ ಎಂಬುದನ್ನು ಕೋರ್ಟ್‌ ಗಮನಿಸಿದೆ.
  •  ಮುಸುಕುಧಾರಿ ವ್ಯಕ್ತಿಗಳು ದಾಳಿಯಲ್ಲಿ ಭಾಗವಹಿಸಿದ್ದರು ಎಂಬ ಪತ್ರಿಕಾ ವರದಿಯನ್ನೇ ಆಧಾರವಾಗಿಸಿಕೊಂಡ ತನಿಖಾಧಿಕಾರಿಗಳು, ಅಂಥ ಸಾಕ್ಷ್ಯವಿಲ್ಲದ ವರದಿಗಳನ್ನು ಕೋರ್ಟ್ ಎದುರು ನಿರಾಕರಿಸುವುದಕ್ಕೆ ಹಿಂಜರಿದಿರುವುದು, ಘಟನೆ ನಿಜಕ್ಕೂ ನಡೆದಿದ್ದು ಹೇಗೆ ಎಂಬುದರ ಬಗ್ಗೆಯೇ ತಾರ್ಕಿಕ ಅನುಮಾನಗಳನ್ನು ಹುಟ್ಟುಹಾಕುತ್ತದೆ
  • ರಾಜಕೀಯ ವೈಷಮ್ಯದ ಭಾಗವಾಗಿಯೇ ಅಪರಾಧಗಳು ಹುಟ್ಟುವ ಸನ್ನಿವೇಶದಲ್ಲಿ ತನಿಖಾ ಸಂಸ್ಥೆಗಳಲ್ಲಿ ಅಪರಾಧ ಸಾಬೀತುಪಡಿಸುವ ಅತಿ ಉತ್ಸಾಹ ಇರುತ್ತದೆ. ಹಾಗೆಂದೇ, ಪ್ರತಿ ಸಾಕ್ಷಿಯನ್ನೂ ಸಿದ್ಧಗೊಳಿಸಿ ಅವರ ಬಾಯಿಂದ ಪ್ರತಿ ನಿಮಿಷದ ಕುರಿತ ಬಾಯಿಪಾಠ ಒಪ್ಪಿಸುವುದು ಅಪನಂಬಿಕೆಗೆ ಕಾರಣವಾಗುತ್ತದೆ ಎಂಬುದನ್ನೂ ಗಣಿಸದೇ ಪ್ರಕರಣ ಸೃಷ್ಟಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!