ದೇಶದಲ್ಲಿ ಸಾಮರಸ್ಯ ಕಾಪಾಡಲು ಆರೆಸ್ಸೆಸ್‌ ನಿರಂತರ ಪ್ರಯತ್ನ: ರಾಜೇಶ್ ಪದ್ಮಾರ್

ಹೊಸದಿಗಂತ ವರದಿ, ಮಡಿಕೇರಿ
ದೇಶದಲ್ಲಿ ಸಾಮರಸ್ಯ ಕಾಪಾಡಲು ಆರ್‍ಎಸ್‍ಎಸ್ ನಿರಂತರ ಪ್ರಯತ್ನಿಸುತ್ತಿದೆ. ಸಾಮಾಜದಲ್ಲಿ ಎಲ್ಲರ ಭಾವನೆಗಳಿಗೆ ಅವಕಾಶ ನೀಡಬೇಕಾಗಿದೆ. ಡಾ.ಅಂಬೇಡ್ಕರ್ ಅವರ ಪ್ರೇರಣೆಯಾಗಿದ್ದಾರೆ. ಅವರ ವಿಚಾರಕ್ಕೆ ಪೂರಕವಾಗಿ ಸಾಮರಸ್ಯ ವೇದಿಕೆ ಕಾರ್ಯಯೋಜನೆ ರೂಪಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್ ಹೇಳಿದರು.
ಜಿಲ್ಲೆಯ ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ಸ್ಮರಣೆ-ಪ್ರೇರಣೆ ಕಾರ್ಯಕ್ರಮದ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸಾಮಾಜಿಕ ಏಕತೆಯಲ್ಲಿ ಹಿಂದೆ ಬಿದ್ದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಸಾಮಾಜಿಕ ವ್ಯಸನಗಳಿಂದ ಹೊರಬರಬೇಕಾಗಿದೆ. ಸಾಮರಸ್ಯಕ್ಕೆ ತೆರೆದ ಮನಸ್ಸಿನ ವೈಚಾರಿಕ ಶಕ್ತಿಯ ಅಗತ್ಯತೆ ಇದೆ ಎಂದು ಅವರು ಹೇಳಿದರು.

ಕೊಳ್ಳೆಗಾಲದ ಶಾಸಕ ಎನ್.ಮಹೇಶ್‌ ಮಾತನಾಡಿ, ಭಾರತ ದೇಶದ ಪ್ರಜಾಪ್ರಭುತ್ವದ ಜನಕ ಎನಿಸಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳುವ ಕೆಲಸವಾಗಬೇಕಾಗಿದೆ. ಸಾಮರಸ್ಯವೇ ಪ್ರಜಾಪ್ರಭುತ್ವದ ಮೂಲವಾಗಿದ್ದು, ಈ ಮೂಲಕ ದೇಶದ ಉಳಿವು ಸಾಧ್ಯ ಎಂದು  ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ, ಭಾಷಣಗಳನ್ನು ಅಧ್ಯಯನ ಮಾಡುವ ಮೂಲಕ ಅಂದಿನ ಹೋರಾಟಗಳ ಸೂಕ್ಷ್ಮತೆ ಅರ್ಥೈಸಿಕೊಳ್ಳಲು ಸಾಧ್ಯ ಎಂದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಜಾರಿಗೆ, ಬೇಡಿಕೆಗಳ ಈಡೇರಿಗಾಗಿ ಎಲ್ಲಾ ಸಮುದಾಯವನ್ನು ಜೋಡಿಸುವ ಕಲ್ಪನೆ ಹೊಂದಿದ್ದರು. ಜಾತಿ ಬೇಧ ವರ್ಗಬೇಧ, ಲಿಂಗಬೇಧವಿಲ್ಲದೆ ವಯಸ್ಕ ಮತದಾನ ಪದ್ಧತಿಗೆ ಆಗ್ರಹಿಸಿದ ಅಂಬೇಡ್ಕರ್ ಯಾವುದೇ ರಕ್ತಪಾತವಿಲ್ಲದೆ ಹೋರಾಟ ನಡೆಸಿ ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು ಎಂದರು.
ಮುಖಂಡರಾದ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಘಚಾಲಕ ಚೆಕ್ಕೇರ ಮನು ಕಾವೇರಪ್ಪ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಾಮರಸ್ಯ ವೇದಿಕೆಯ ಸಂಯೋಜಕ ಡಿ.ನರಸಿಂಹ ಸ್ವಾಗತಿಸಿದರೆ, ಶಿಕ್ಷಕಿ ಶೋಭಾ ಭಟ್ ವೈಯಕ್ತಿಕ ಗೀತೆ ಹಾಡಿದರು. ಭರತ್ ಮಾಚಯ್ಯ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮಹೇಶ್ ಅಮೀನ್ ಅವರಿಂದ ವಂದೇ ಮಾತರಂ ಗೀತೆಯಾದರೆ, ವಿಶ್ವ ಹಿಂದೂ ಪರಿಷತ್ ಕುಶಾಲನಗರ ಘಟಕದ ಅಧ್ಯಕ್ಷ ದಿನೇಶ್ ಅವರು ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!