ಲಂಕನ್ನರಿಗೆ ಸೋಲುಣಿಸಿ ಲೆಜೆಂಡ್ಸ್ ಲೀಗ್ ಟೂರ್ನಿ ಚಾಂಪಿಯನ್ ಆದ ಇಂಡಿಯಾ ಲೆಜೆಂಡ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್‍ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್  ವಿರುದ್ಧ 33 ರನ್‍ಗಳ ಭರ್ಜರಿ ಜಯ ಸಾಧಿಸಿದ ಇಂಡಿಯಾ ಲೆಜೆಂಡ್ಸ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
ರಾಯ್‌ಪುರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಲೆಜೆಂಡ್ಸ್, ಮೊದಲ ಎಸೆತದಲ್ಲೇ ನಾಯಕ ಸಚಿನ್ ತೆಂಡೂಲ್ಕರ್ ರನ್ನು ಶೂನ್ಯಕ್ಕೆ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಬಂದ ಸುರೇಶ್ ರೈನಾ ಕೂಡ ಎರಡು ಎಸೆತಗಳಲ್ಲೇ ನಿರ್ಗಮಿಸಿದರು. ಈ ಹಂತದಲ್ಲಿ ಒಂದೆಡೆ ಕ್ರೀಸ್‌ ಕಚ್ಚಿ ನಿಂತಿದ್ದ ಮನ್ ಓಜಾ ಗೆ ಸಾಥ್‌ ನೀಡಲು ಭಾರತವು ಪಿಂಚ್ ಹಿಟ್ಟರ್ ಆಗಿ ವಿನಯ್ ಕುಮಾರ್ ಅವರನ್ನು ನಂ.4 ಕ್ಕೆ ಬಡ್ತಿ ನೀಡಿತು. ಈ ಜೋಡಿ ಮೂರನೇ ವಿಕೆಟ್‌ಗೆ 90 ರನ್ ಸೇರಿಸಿತು.

ವಿನಯ್ ಅಂತಿಮವಾಗಿ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಮತ್ತೊಂಡೆದೆ ಅದ್ಭುತ ಪ್ರದರ್ಶನ ಮುಂದುವರೆಸಿದ ನಮನ್ ಓಜಾ ಭರ್ಜರಿ ಶತಕ (108 ರನ್‌ 71 ಎಸೆತ) ಸಿಡಿಸಿ ವಿಜೃಂಭಿಸಿದರು. ನಮನ್ ಬ್ಯಾಟಿಂಗ್‌ ಬಲದಿಂದ ಇಂಡಿಯಾ ಲೆಜೆಂಡ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿತು.
ಗುರಿ ಬೆನ್ನತ್ತಿದ ಶ್ರೀಲಂಕಾ ಪರ ಇಶಾನ್ ಜಯರತ್ನ ಅರ್ಧಶತಕ ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ವಿಫಲರಾದರು.
ಭಾರತೀಯ ಬೌಲರ್‌ ಗಳ ಮಾರಕ ದಾಳಿಗೆ ತತ್ತರಿಸಿ ಶ್ರೀಲಂಕಾ 18.5 ಓವರ್‌ಗಳ ಅಂತ್ಯಕ್ಕೆ 162 ರನ್‍ಗೆ ಆಲೌಟ್ ಆಯಿತು. ಭಾರತದ ಪರ ವಿನಯ್ ಕುಮಾರ್ 3 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ 2, ಸ್ಟುವರ್ಟ್ ಬಿನ್ನಿ, ರಾಜೇಶ್ ಪವರ್, ರಾಹುಲ್ ಶರ್ಮಾ, ಯೂಸುಫ್ ಪಠಾಣ್ ತಲಾ 1 ವಿಕೆಟ್ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!