Friday, July 1, 2022

Latest Posts

ಫಿನಾಲೆ ತಲುಪಿದ್ದ ಭಾರತೀಯ ಶೂಟರ್ : 7ನೇ ಸ್ಥಾನಕ್ಕೆ ರುಬೀನಾ ಫ್ರಾನ್ಸಿಸ್ ಆಟ ಅಂತ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪೊಕ್ಸ್ ನ ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಭಾರತದ ರುಬೀನಾ ಫ್ರಾನ್ಸಿಸ್ 7ನೇ ಸ್ಥಾನಕ್ಕೆ ತೃಪ್ತಿಯಾಗಿದ್ದಾರೆ.
ಫಿನಾಲೆಯಲ್ಲಿ 128.1 ಅಂಕಗಳನ್ನು ಪಡೆದು ಇರಾನ್’ನ ಸಾರಾ ಜಾವಾನ್ಮರ್ಡಿ ವಿರುದ್ಧ ಸೋಲೊಪ್ಪಿದ್ದಾರೆ.
ಈ ಪಂದ್ಯದಲ್ಲಿ ಇರಾನ್ ನಿನ ಸಾರಾ ಜಾವಾನ್ಮರ್ಡಿಗೆ ಚಿನ್ನದ ಪದಕ, ಟರ್ಕಿಯ ಎ.ಫೆಲಿವನರ್ ಗೆ ಬೆಳ್ಳಿ ಪದಕ ಹಾಗೂ ಹಂಗೇರಿಯ ಕೆ. ಡವಿಡ್ ಗೆ ಕಂಚಿನ ಪದಕ ಪಡೆದಿದ್ದಾರೆ.
ಮೊದಲ ಹಂತದಲ್ಲಿ 93.1 ಅಂಕಗಳ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದರು. ಅರ್ಹತಾ ಪಂದ್ಯದಲ್ಲಿ ಒಟ್ಟು 187 ಅಂಕಗಳನ್ನು ಪಡೆದು ಆರನೇ ಸ್ಥಾನದಲ್ಲಿದ್ದರು. ರುಬಿನಾ ನಂತರ ಅರ್ಹತೆಗಳ ಹಂತದಲ್ಲಿ 282 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೆರಳಿದರು. ಮುಂದಿನ ಎರಡು ಸರಣಿಯಲ್ಲಿ, ರುಬಿನಾ ಕ್ರಮವಾಗಿ 93 ಅಂಕಗಳನ್ನು ದಾಖಲಿಸಿ ಮತ್ತು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss