ನಮಗಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಸಿಎಂ ಬದಲಾವಣೆ ಅವಸರದಲ್ಲಿದ್ದಾರೆ: ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಆಡಳಿತ ಪಕ್ಷದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಕಳೆದ 1 ತಿಂಗಳಿಂದ ಹಿರಿಯ ಸಚಿವರ ಚಟುವಟಿಕೆ ಗಮನಿಸಿದಾಗ, ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಮುಖ್ಯಮಂತ್ರಿಗಳ ಬದಲಾವಣೆ ಅವಸರದಲ್ಲಿದ್ದಾರೆ ಅಂತ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಈಗಿನ ಮುಖ್ಯಮಂತ್ರಿಯನ್ನು ತೆಗೆದರೆ ತಮಗೆ ಅವಕಾಶ ಇದೆ ಎಂದು ಅವರದ್ದೇ ಪಕ್ಷದ ಬಹಳ ಹಿರಿಯ ಸಚಿವರು ಅಂದುಕೊಂಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬರೋದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಅವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದರ ಒಟ್ಟು ಪರಿಣಾಮದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದರು

ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯಾವುದಕ್ಕೂ ಹಣ ಬಿಡುಗಡೆ ಆಗುತ್ತಿಲ್ಲ. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಿಂತು ಹೋಗಿವೆ. ಇದರಿಂದ ರಾಜ್ಯ ಇನ್ನಷ್ಟು ಹಿನ್ನಡೆ ಆಗುತ್ತಿದೆ. ಕಳೆದ 2-3 ತಿಂಗಳಿಂದ ಹಗರಣಗಳ ಸುರಿಮಳೆ ಆಗುತ್ತಿದೆ. ಮುಡಾ ಹಗರಣದಲ್ಲಿಯೇ ಕಾಲ ಕಳೆದು ಹೊಯ್ತು. ಇಂತಹ ಒಂದು ಸರ್ಕಾರ ಪಡೆದುಕೊಂಡಿದ್ದು ಕರ್ನಾಟಕದ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!