spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದ ಅತೀ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದ 24ರ ಯುವತಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟರ್ಕಿಯ ರುಮೈಸಾ ಗೆಲ್ಗಿ ಅವರು ವಿಶ್ವದ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ 2014ರಲ್ಲಿ 18ನೇ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದ ಯುವತಿ ಇದೀಗ ಎರಡನೇ ಬಾರಿಗೆ ಮತ್ತೆ ದಾಖಲೆ ಬರೆದಿದ್ದಾರೆ. ರುಮೈಸಾ 24 ವರ್ಷದ ಯುವತಿ, ಈಕೆ 215.16 ಸೆಂ.ಮೀ. ಎತ್ತರವಿದ್ದು, ಈಗ ವಿಶ್ವದ ಅತೀ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ, ವಿಭಿನ್ನವಾಗಿರುವುದು ತಪ್ಪಲ್ಲ. ಇದು ನೀವು ಹಿಂದೆಂದೂ ಊಹಿಸದ ಸಾಧನೆ ಮಾಡಿಸಲಿದೆ. ಈಗ ಟರ್ಕಿಯ ರುಮೈಸಾ ವಿಶ್ವದ ಅತೀ ಎತ್ತರದ ಮಹಿಳೆ ಎಂದು ಬರೆದುಕೊಂಡಿದೆ.
ಗಾಲಿ ಕುರ್ಚಿಯ ಸಹಾಯದಿಂದ ನಡೆಯುವ ರುಮೈಸಾ ಅವರಿಗೆ ವೀವರ್ ಸಿಂಡ್ರೋಮ್ ಎನ್ನುವ ಕಾಯಿಲೆ ಇದೆ. ಇದರಿಂದ ಆಕೆಯ ಮೂಳೆಗಳ ಪಕ್ವತೆ ಮೇಲೆ ಪರಿಣಾಮ ಬೀರಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss