‘ಆಯಮ್ಮ ಕ್ಯಾನ್ಸರ್ ಇದ್ದಂಗೆ, ಎಲ್ಲಾರ‍್ನೂ ಬುಟ್ಟಿಗೆ ಹಾಕೋತಾರೆ’ ರೂಪಾ ಮೌದ್ಗಿಲ್ ಆಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಮ್ಮ ವೈಯಕ್ತಿಕ ವಿಚಾರವನ್ನು ಬೀದಿಗೆ ತರಬೇಡಿ ಎಂದು ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.

ಈ ಮಧ್ಯೆ ರೂಪಾ ಅವರ ಆಡಿಯೋ ಲೀಕ್ ಆಗಿದ್ದು, ಇದರಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜತೆ ಮಾತನಾಡಿದ್ದಾರೆ.

ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ಕಬಿನಿ ಹತ್ರ ಲ್ಯಾಂಡ್ ಇದೆ, ನನ್ನ ಗಂಡನ ಹೆಲ್ಪ್ ಕೂಡ ತಗೊಂಡಿದ್ದಾರೆ. ಲ್ಯಾಂಡ್ ಯಾರ ಹೆಸರಲ್ಲಿ ಮಾಡಿದ್ರೆ ಹೇಗೆ ಅಂತೆಲ್ಲಾ ಕೇಳಿದ್ದಾರೆ. ಆಯಮ್ಮನ ದಿಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ಲ, ನಾನು ಅವರನ್ನು ಇಲ್ಲಿ ಇರೋದಕ್ಕೆ ಬಿಡೋದಿಲ್ಲ.
ನಾನೇ ಟ್ರಾನ್ಸ್‌ಫರ್ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದಂತೆ, ಎಲ್ಲರನ್ನೂ ಬುಟ್ಟಿಗೆ ಹಾಕೋತಾಳೆ. ಡಿ.ಕೆ. ರವಿ ವಿಷಯದಲ್ಲೂ ಹೀಗೆ ಆಗಿದೆ, ನಾವೇ ನೋಡಿದಿವಿ ಎಂದು ಆರೋಪ ಮಾಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!