ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ: ನಷ್ಟದಲ್ಲಿ ಷೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ  ಭಾರೀ ಕುಸಿತ ಕಂಡಿದೆ. ಡಾಲರ್‌ ಎದುರು 43 ಪೈಸೆ ಇಳಿಕೆಯಾಗಿ 81.52ರಲ್ಲಿ ವಹಿವಾಟು ನಡೆಯುತ್ತಿದೆ. ಸೋಮವಾರ ಬೆಳಗ್ಗೆಯ ಹೊತ್ತಿಗೆ, ಯುಎಸ್ ಕರೆನ್ಸಿ ಬಲವರ್ಧನೆ, ಹೂಡಿಕೆದಾರರ ಮಾರಾಟ ಮತ್ತು ಅಂತರರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳಿಂದ ರೂಪಾಯಿ ಮತ್ತಷ್ಟು ದುರ್ಬಲಗೊಂಡಿತು.

ಅಮೆರಿಕದಲ್ಲಿ ಹಣದುಬ್ಬರವನ್ನು ತಡೆಯಲು ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಯತ್ನಿಸಿ, ಇದು ಭಾರತೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶವೂ ಅಲರ್ಟ್ ಆಗಿದ್ದು, ಆರ್‌ಬಿಐ ಈ ಬಗ್ಗೆ ಗಮನ ಹರಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ರೂಪಾಯಿ ಮೌಲ್ಯ ಕುಸಿತ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಈ ವಾರ ಸಭೆ ನಡೆಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಗಮನ ಹರಿಸಿದ ಆರ್‌ಬಿಐ 50 ಬೇಸಿಸ್ ಪಾಯಿಂಟ್‌ಗಳಿಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ಮತ್ತೊಂದೆಡೆ, ದೇಶೀಯ ಷೇರು ಮಾರುಕಟ್ಟೆಗಳು ನಷ್ಟವನ್ನು ಅನುಭವಿಸುತ್ತಲೇ ಇವೆ.

ಸೋಮವಾರ ವಹಿವಾಟು ಆರಂಭವಾದಾಗ ಸೆನ್ಸೆಕ್ಸ್ 970 ಅಂಕ ಕುಸಿದು 57,129ಕ್ಕೆ ತಲುಪಿತ್ತು. ನಿಫ್ಟಿ 312 ಅಂಕ ಕುಸಿದು 17,015ಕ್ಕೆ ತಲುಪಿದೆ. ಹೂಡಿಕೆದಾರರು ಮಾರಾಟ ಮಾಡುತ್ತಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ಇಂದು ಷೇರುಗಳ ಕುಸಿತದಿಂದಾಗಿ ಹೂಡಿಕೆದಾರರು ಕಳೆದುಕೊಂಡಿರುವ ಹೂಡಿಕೆಯ ಮೌಲ್ಯವು ಸುಮಾರು 7 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.  ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ.4ರಷ್ಟು ಕುಸಿದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!