ಡಾಲರ್‌ ವಿರುದ್ಧ ತುಸು ಚೇತರಿಕೆ ಕಂಡ ರೂಪಾಯಿ : 12 ಪೈಸೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸೊಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 12 ಪೈಸೆಗಳಷ್ಟು ಏರಿಕೆ ಕಂಡಿದ್ದು ರೂಪಾಯಿ ದರವು 77.93 ರಷ್ಟಾಗಿದೆ. ಈ ಏರಿಕೆಯ ಹಿಂದೆ ಕಚ್ಚಾತೈಲಬೆಲೆಗಳಲ್ಲಿನ ಕುಸಿತವು ಕಾರಣವಾಗಿದೆ. ಅನಿಯಮಿತ ವಿದೇಶಿ ನಿಧಿಯ ಹೊರಹರಿವು, ದೇಶೀಯ ಷೇರುಗಳಲ್ಲಿನ ಕುಸಿತವು ಡಾಲರ್‌ ಲಾಭವನ್ನು ನಿರ್ಬಂಧಿಸಿದೆ ಎಂದು ಫಾರೆಕ್ಸ್‌ ಡೀಲರ್‌ಗಳು ಹೇಳಿದ್ದಾರೆ.

ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಡಾಲರ್‌ಗೆ 77.98 ಆರಂಭಿಕ ಮೌಲ್ಯ ದಾಖಲಿಸಿತ್ತು. ನಂತರ 77.93 ಬಂದ ರೂಪಾಯಿ ದರವು ಕೊನೆಯ ಮುಕ್ತಾಯದಲ್ಲಿ 12 ಪೈಸೆಯ ಏರಿಕೆಯನ್ನು ದಾಖಲಿಸಿದೆ.

ಇದರ ನಡುವೆ ಆರು ಕರೆನ್ಸಿಗಳ ಮೂಲಕ ಡಾಲರ್‌ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು 0.30 ಶೇಕಡಾ ಕುಸಿದು 104.38 ಕ್ಕೆ ತಲುಪಿದೆ. ಜಾಗತಿಕ ತೈಲಬೆಲೆಯ ಮಾನದಂಡವಾಗಿರುವ ಬ್ರೆಂಟ್‌ ಕಚ್ಚಾತೈಲವು ಪ್ರತಿ ಬ್ಯಾರೆಲ್‌ಗೆ 0.26 ಶೇಕಡಾರಷ್ಟು ಕುಸಿದಿದ್ದು 112.83ಡಾಲರ್‌ಗೆ ಇಳಿಕೆಯಾಗಿದೆ.

ರೂಪಾಯಿದರದಲ್ಲಿನ ಏರಿಕೆಗೆ ಒಂದುತಿಂಗಳಲ್ಲಿ ಹೆಚ್ಚು ಕುಸಿತ ಕಂಡಿರುವ ಕಚ್ಚಾತೈಲವು ಸಹಾಯ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!