ಡಾಲರ್‌ ಎದುರು ಬಿದ್ದ ರೂಪಾಯಿ. ಸಾರ್ವಕಾಲಿಕ ದಾಖಲೆ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಸೋಮವಾರ ರೂಪಾಯಿ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು ಡಾಲರ್‌ ಎದುರು 0.7% ದಷ್ಟು ಕುಸಿತ ಕಂಡಿದೆ. ಇದರಿಂದ ಪ್ರಸ್ತುತ ಒಂದು ಡಾಲರ್‌ ಮೌಲ್ಯವು 77.41 ರಷ್ಟು ದಾಖಲಾಗಿದೆ. ಕಳೆದ ಮಾರ್ಚ್‌ ನಲ್ಲಿ ರೂಪಾಯಿಯು ಸಾರ್ವಕಾಲಿಕವಾಗಿ ಅತಿ ಕನಿಷ್ಟ ಅಂದರೆ 76.981 ಮಟ್ಟವನ್ನು ತಲುಪಿತ್ತು. ಆದರೆ ಈಗ ಆ ದಾಖಲೆಯೂ ಮುರಿದು ರೂಪಾಯಿ ಇಲ್ಲಿಯವರೆಗಿನ ಅತಿ ಹೆಚ್ಚು ಕುಸಿತ ಕಂಡಿದೆ.

ಡಾಲರ್‌ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದು ಮತ್ತು ಏರುತ್ತಿರುವ ತೈಲ ಬೆಲೆಯು ಇದಕ್ಕೆ ಹೆಚ್ಚಿನ ಪರಿಣಾಮ ಬೀರಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಬ್ಯಾಂಕ್‌ಗಳು ನೀತಿಗಳನ್ನು ಬಿಗಿಗೊಳಿಸಿದ ಪರಿಣಾಮವಾಗಿ ಮಾರುಕಟ್ಟೆಗಳು ಕುಗ್ಗಿದ್ದು ವಿದೇಶಿ ನಿಧಿಗಳು ಭಾರತದ ಷೇರುಗಳಿಂದ 17.7 ಶತಕೋಟಿ ಡಾಲರ್‌ ಗಳಷ್ಟು ಮೊತ್ತವನ್ನು ಹಿಂತೆಗೆದುಕೊಂಡಿವೆ. ಇದರಿಂದ ಸೆನ್ಸೆಕ್ಸ್‌ ಸೂಚ್ಯಂಕವು 1.5% ದಷ್ಟು ಕುಸಿತಕಂಡಿದ್ದು ಸ್ಟಾಕ್ ಗಳ ಕುಸಿತ ಮುಂದುವರೆದಿದೆ.

ಸಾಮಾನ್ಯವಾಗಿ ಕರೆನ್ಸಿಯ ನಷ್ಟವನ್ನು ತಡೆಯಲು ಆರ್‌ಬಿಐ ತನ್ನ ವಿದೇಶಿವಿನಿಮ (ಫಾರೆಕ್ಸ್) ಮೀಸಲು ಬಳಸುತ್ತದೆ. ಇತ್ತೀಚಿನ ಮಾಹಿತಿಯ ಪ್ರಕಾರ ಬಾರತದ ವಿದೇಶಿವಿನಿಮಯ ಮೀಸಲು 600 ಶತಕೋಟಿ ಡಾಲರ್‌ ಗಿಂತ ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!