ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿದೆ.
ಇಂದು ಮುಂಜಾನೆ ಕೈವ್ನ ಮೂರು ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ ಬಿದ್ದಿದೆ.
ರಾತ್ರಿಯಿಡೀ ವಾಯು ದಾಳಿ ನಡೆಸಿದ ರಷ್ಯಾ ನಂತರ ಡ್ರೋನ್ ದಾಳಿ ನಡೆಸಿದೆ. ವಸತಿ ಸಂಕೀರ್ಣಗಳಲ್ಲಿ ಒಂಬತ್ತು ಅಂತಸ್ತಿನ ಕಟ್ಟಡದ ಛಾವಣಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.