ರಷ್ಯದಿಂದ ತೈಲ ಖರೀದಿ- ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ ಜೈಶಂಕರ್

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಮೆರಿಕದ ಜತೆ ಭಾರತದ 2+2 ಮಾತುಕತೆ ನಡೆಯುತ್ತಿದೆ. ಅಂದರೆ, ಭಾರತದ ಇಬ್ಬರು ಸಚಿವರಾದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ವಿದೇಶ ಸಚಿವ ಜೈಶಂಕರ್ ಅವರು ಅಲ್ಲಿನ ತತ್ಸಮಾನ ಸಚಿವರೊಂದಿಗೆ ಆ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಸಹಕಾರ ಒಪ್ಪಂದಗಳ ಬಗ್ಗೆ ಸಮಾಲೋಚಿಸುವುದು.

ಈ ಸಂಬಂಧ ಭಾರತದ ಸಚಿವದ್ವಯರು ಅಮೆರಿಕದಲ್ಲಿ ಸಮಾಲೋಚನೆ ನಿರತರಾಗಿರುವಾಗ ಸಹಜವಾಗಿಯೇ ಭಾರತವು ರಷ್ಯದಿಂದ ಅಗ್ಗದ ತೈಲ ಖರೀದಿಸುತ್ತಿರುವ ವಿಷಯ ಚರ್ಚೆಗೆ ಬಂದಿದೆ. ಇದಕ್ಕೆ ಅಮೆರಿಕದ ಪ್ರತಿರೋಧ ಗೊತ್ತಿರುವಂಥದ್ದೇ. ಇದಕ್ಕೆ ಸಚಿವ ಜೈಶಂಕರ್ ನೀಡಿರುವ ಉತ್ತರ ಮಾರ್ಮಿಕವಾಗಿದೆ- “ಪ್ರತಿದಿನ ಮಧ್ಯಾಹ್ನದ ವೇಳೆ ಯುರೋಪ್ ಎಷ್ಟು ತೈಲವನ್ನು ರಷ್ಯದಿಂದ ಖರೀದಿಸುತ್ತಿದೆಯೋ ಅಷ್ಟು ಪ್ರಮಾಣವನ್ನು ನಾವು ಒಂದು ತಿಂಗಳಲ್ಲಿ ಖರೀದಿಸುತ್ತೇವೆ. ಹೀಗಾಗಿ ನಿಮ್ಮ ಗಮನ ಇರಬೇಕಿರುವುದು ಯುರೋಪ್ ಮೇಲೆಯೇ ಹೊರತು ನಮ್ಮ ಮೇಲಲ್ಲ. ನಮ್ಮ ಇಂಧನ ಸುರಕ್ಷತೆಗಾಗಿ ಈ ಕ್ರಮವೇ ಹೊರತು ಮತ್ತೇನಕ್ಕಲ್ಲ” ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!