ರಷ್ಯ ಮತ್ತು ಯುರೋಪ್ ನಡುವಿನ ಆರ್ಥಿಕ ಸಮರ ಇನ್ನಷ್ಟು ತೀವ್ರ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯ ಹಿಂತೆಗೆತದ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರ ಶವಗಳು ಪತ್ತೆಯಾಗಿರುವ ವಿದ್ಯಮಾನದ ಹಿನ್ನೆಲೆಯಲ್ಲಿ, ರಷ್ಯದ ಕೃತ್ಯ ಖಂಡಿಸಿ ಇನ್ನಷ್ಟು ನಿರ್ಬಂಧ ನಿಯಮಗಳನ್ನು ಅನುಸರಿಸುವುದಾಗಿ ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಹೇಳಿದ್ದಾರೆ.

ಫ್ರಾನ್ಸ್ ಮತ್ತು ಜರ್ಮನಿಗಳು ರಷ್ಯದ ಗ್ಯಾಸ್ ಮತ್ತು ಕಲ್ಲಿದ್ದಲು ಆಮದನ್ನು ಇನ್ನಷ್ಟು ಕಡಿಮೆ ಮಾಡುವುದಾಗಿ ಹೇಳಿವೆ. ಇವೆರಡೂ ದೇಶಗಳು ಅನೇಕ ರಷ್ಯ ರಾಜತಾಂತ್ರಿಕರನ್ನು ಹೊರಹಾಕಿವೆ.

ಇತ್ತ ರಷ್ಯ ಅಧ್.ಕ್ಷ ವ್ಲಾದಿಮಿರ್ ಪುಟಿನ್, ಯುರೋಪ್ ಮತ್ತು ಯುರೋಪಿಯನ್ ಒಕ್ಕೂಟದ ಜನರಿಗೆ ವೀಸಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ರಷ್ಯವು ಕೆಲವು ದೇಶಗಳನ್ನು ಸ್ನೇಹಿತರಲ್ಲ ಎಂದು ಗುರುತಿಸಿದ್ದು, ಆ ಎಲ್ಲ ದೇಶಗಳಿಂದ ವಿಮಾನ ಹಾರಾಟ ಇನ್ನಿತರ ಚಟುವಟಿಕೆಗಳಿಗೆ ನಿರ್ಬಂಧವಿದೆ. ಅಮೆರಿಕ, ಆಸ್ಟ್ರೇಲಿಯ, ಕೆನಡ, ಐರೋಪ್ಯ ಒಕ್ಕೂಟ, ಜಪಾನ್, ನ್ಯೂಜಿಲೆಂಡ್, ಸಿಂಗಾಪುರ, ಸೌತ್ ಕೊರಿಯಾ, ತೈವಾನ್, ಉಕ್ರೇನ್ ಇವೆಲ್ಲವೂ ರಷ್ಯ ಪಾಲಿನ ಮಿತ್ರರಲ್ಲದ ರಾಷ್ಟ್ರಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!