ಉಕ್ರೇನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಉದ್ದೇಶ ನಮಗಿಲ್ಲ: ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರಮಾಣು ಅಸ್ತ್ರಗಳನ್ನು ಬಳಸುತ್ತದೆ ಎಂಬ ಸುದ್ದಿಯು ಯುದ್ಧದ ಆರಂಭದಿಂದಲೂ ಕೇಳಿಬರುತ್ತಿದೆ.  ಆದರೆ ಇದೀಗ ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪಾಶ್ಚಿಮಾತ್ಯ ಅಧಿಕಾರಿಗಳು ರಷ್ಯಾದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ರಷ್ಯಾದ ರಾಯಭಾರಿ ಹೇಳಿಕೆಯನ್ನಾಧರಿಸಿ ರಷ್ಯಾ ಸ್ಪಷ್ಟನೆ ನೀಡಿದೆ.

ರಷ್ಯಾದ ಮಾಹಿತಿ ಮತ್ತು ಪತ್ರಿಕಾ ವಿಭಾಗದ ಉಪನಿರ್ದೇಶಕ ಅಲೆಕ್ಸಿ ಜೈಟ್ಸೆವ್, ʻಪರಮಾಣು ಯುದ್ಧದಿಂದ ಯಾರೂ ವಿಜೇತರಾಗಲು ಸಾಧ್ಯವಿಲ್ಲʼ ಎಂಬ ತತ್ವಕ್ಕೆ ರಷ್ಯಾ ಬದ್ಧವಾಗಿದೆ ಎಂದರು. ರಷ್ಯಾದ ಪರಮಾಣು ನೀತಿಯನ್ನು ತಪ್ಪಾಗಿ ಪ್ರತಿನಿಧಿಸುವ ಪಾಶ್ಚಿಮಾತ್ಯ ದೇಶಗಳು ಹಾಗೂ ಯುನೈಟೆಡ್ ಸ್ಟೇಟ್ಸ್‌ನ ವರದಿಗಳನ್ನು ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ ಖಂಡಿಸಿದ್ದಾರೆ.

ಉಕ್ರೇನ್-ರಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಪರಮಾಣು ಉದ್ವಿಗ್ನತೆಯನ್ನು ಹೆಚ್ಚಿಸಲು ರಷ್ಯಾವನ್ನು ತಪ್ಪಾಗಿ ದೂಷಿಸಿದೆ. ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಹೇಳಿಕೆ ವಾಸ್ತವವಾಗಿ ವಿರೋಧಾತ್ಮಕವಾಗಿವೆ ಎಂದು ಅನಾಟೊಲಿ ಆಂಟೊನೊವ್ ಆರೋಪ ಮಾಡಿದ್ರು. ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಡಲು ಪಾಶ್ಚಿಮಾತ್ಯ ದೇಶಗಳ ಬೆಂಬಲವೇ ಕಾರಣ ಎಂದು ನ್ಯಾಟೋ ಮೈತ್ರಿಕೂಟ ಕೂಟ ಅಭಿಪ್ರಾಯಪಟ್ಟಿದೆ. ಪರಮಾಣು ಉದ್ವಿಗ್ನತೆಯನ್ನು ಹೆಚ್ಚಿಸಲು ಪಾಶ್ಚಿಮಾತ್ಯ ದೇಶಗಳು ಕೊಡುಗೆ ನೀಡಿದ್ದಾರೆ ಎಂದು ರಷ್ಯಾ ರಾಯಭಾರಿ ಅನಾಟೊಲಿ ಆಂಟೊನೊವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!