Tuesday, August 16, 2022

Latest Posts

ಕೊರೋನಾ ಕಾಲ್ಕಿತ್ತಿಲ್ಲ! ರಷ್ಯಾದಲ್ಲಿ ದಿನಕ್ಕೆ ಸಾವಿರದ ಸರಾಸರಿಯಲ್ಲಿ ಸಾಯ್ತಿದಾರೆ ಜನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಮಹಾಮಾರಿ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಯಿತು ಎಂದು ನಿಟ್ಟುಸಿರುವ ಬಿಡುವಷ್ಟರಲ್ಲಿ ವಿದೇಶಗಳಲ್ಲಿ ಸಾವಿನ ಸರಣಿ ಮುಂದುವರೆಯುತ್ತಿದೆ. ರಷ್ಯಾದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಈ ವಾರ ದಾಖಲೆಯ  ಮಟ್ಟವನ್ನು ತಲುಪಿದೆ.

ಹೌದು.. ರಷ್ಯಾದಲ್ಲಿ ಕಳೆದ ವಾರದಲ್ಲಿ ಎರಡು ದಿನ 1,000 ಕ್ಕೂ ಹೆಚ್ಚು ಜನರ ಪ್ರಾಣವನ್ನು ಕೊರೋನಾ ಆಹುತಿ ಪಡೆದಿದೆ. ರಷ್ಯಾದಲ್ಲಿ ಕೋವಿಡ್ ಅಭಿಯಾನ ಕೂಡ ನಿಧಾನ ಗತಿಯಲ್ಲಿ ಸಾಗುತ್ತಿದ್ದು,  ಮೂರನೇ ಒಂದು ಭಾಗದಷ್ಟು ರಷ್ಯನ್ನರು ಮಾತ್ರ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.

ಲಸಿಕೆ ಪಡೆಯುವಂತೆ ಸರ್ಕಾರ ತನ್ನ ನಾಗರಿಕರಿಗೆ ಪ್ರಚಾರದ ಮೂಲಕ ಮನವಿ ಮಾಡುತ್ತಿದ್ದರೂ ಸಹ  ನಾಗರಿಕರು ಕೊರೋನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಕೇವಲ 47.5 ಮಿಲಿಯನ್ ರಷ್ಯನ್ನರಿಗೆ ಮಾತ್ರ  ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ.

ಸ್ಪುಟ್ನಿಕ್ ವಿ, ಸ್ಪುಟ್ನಿಕ್ ವಿ ಲೈಟ್,  ಎಪಿವ್ ಕೊರೋನಾ ಮತ್ತು ಕೋವಿವಾಕ್‌ ಎಂಬ ನಾಲ್ಕು   ಸ್ವದೇಶಿ ಕೋವಿಡ್-19 ಲಸಿಕೆಗಳನ್ನು ರಷ್ಯಾ ಹೊಂದಿದೆ. ಸ್ಪುಟ್ನಿಕ್ ವಿ ಪರಿಣಾಮಕಾರಿ ಪರಿಣಾಮ ಬೀರಲಿದೆ ಎಂದು ಅಧ್ಯಯನಗಳೂ ಕೂಡ ಸಾಬೀತು ಮಾಡಿವೆ.

ಕೊರೋನಾ ಲಸಿಕೆ ಪಡೆದುಕೊಳ್ಳುವಲ್ಲಿ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾಗುವುದಕ್ಕೆ ಲಸಿಕೆ ಕುರಿತು ಜನರ ನಿರ್ಲಕ್ಷ್ಯ ಮನೋಭಾವವೇ ಕಾರಣವಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಇದನ್ನು ಮನಗಂಡು ಜನರು  ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮನವಿ ಮಾಡಿಕೊಂಡಿದ್ದಾರೆ.

ರಷ್ಯಾದಲ್ಲಿ ಶನಿವಾರ 37,678 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 1074 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss