ಒಂದು ಗಂಟೆಯಲ್ಲಿ 17 ಕ್ಷಿಪಣಿ ಉಡಾವಣೆ: ಉಕ್ರೇನ್ ಮೇಲೆ ರಷ್ಯಾ ಮತ್ತೊಮ್ಮೆ ಭೀಕರ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. ರಷ್ಯಾದ ಸೇನೆಯು ಉಕ್ರೇನ್‌ನ ಹಲವು ಪ್ರದೇಶಗಳ ಮೇಲೆ ದಾಳಿ ಮಾಡುತ್ತಲೇ ಇದೆ. ಈ ಕ್ರಮದಲ್ಲಿ ಶುಕ್ರವಾರ ಒಂದು ಗಂಟೆಯೊಳಗೆ ರಷ್ಯಾ 17 ಕ್ಷಿಪಣಿಗಳನ್ನು ಉಡಾಯಿಸಿಎ. ಉಕ್ರೇನ್‌ನ ಶಕ್ತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ. ಏಕಕಾಲದಲ್ಲಿ ಭಾರಿ ಸಂಖ್ಯೆಯ ಕ್ಷಿಪಣಿಗಳನ್ನು ಉಡಾವಣೆ ಮಾಡಿರುವುದು ಒಂದು ವರ್ಷದಲ್ಲಿ ಇದೇ ಮೊದಲು. ಶುಕ್ರವಾರ ಮುಂಜಾನೆ 4 ಗಂಟೆಗೆ ರಷ್ಯಾದ ಕ್ಷಿಪಣಿಗಳು ಉಕ್ರೇನ್‌ನ ಝಪೊರಿಜಿಯಾ ಪ್ರದೇಶದ ಮೇಲೆ ಮಳೆ ಸುರಿದವು.

ಉಭಯ ದೇಶಗಳ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ, ರಷ್ಯಾ ನೂರಾರು ಸಣ್ಣ ಮತ್ತು ದೊಡ್ಡ ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಉಡಾಯಿಸಿದೆ. ಆದಾಗ್ಯೂ, ಹೆಚ್ಚಿನ ಕ್ಷಿಪಣಿ ದಾಳಿಗಳು ಶಕ್ತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಉಕ್ರೇನ್ ಹೇಳಿಕೊಂಡಿದೆ. ನ್ಯೂಯಾರ್ಕ್ ಟೈಮ್ಸ್ ಲೇಖನದ ಪ್ರಕಾರ, ಉಕ್ರೇನ್‌ನ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ರಷ್ಯಾ 17 ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ರಾಕೆಟ್‌ಗಳೊಂದಿಗೆ ಉಕ್ರೇನ್ ಮೇಲೆ ದಾಳಿ ಮಾಡಿತು, ಆದರೆ ಅವುಗಳಲ್ಲಿ ಹನ್ನೆರಡು ಹೊಡೆದುರುಳಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ.. ರಷ್ಯಾಕ್ಕೆ ನೇರ ಉತ್ತರ ನೀಡಲು ಉಕ್ರೇನ್ ಸಕಲ ಪ್ರಯತ್ನ ನಡೆಸುತ್ತಿದೆ. ಆ ದೇಶದ ಅಧ್ಯಕ್ಷ ಝೆಲೆನ್ಸ್ಕಿ ಪರ ರಾಷ್ಟ್ರಗಳ ಬೆಂಬಲ ಪಡೆದು ಆ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಅಮೆರಿಕದ ಜತೆಗೆ ಹಲವು ದೇಶಗಳು ಈಗಾಗಲೇ ಶಸ್ತ್ರಾಸ್ತ್ರಗಳನ್ನು ಒದಗಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!