ಮತ್ತೆ ತೀವ್ರತೆ ಪಡೆದ ಉಕ್ರೇನ್ ಕದನ: ಒಂದೇ ಬಾರಿಗೆ 100 ಕ್ಷಿಪಣಿಗಳನ್ನು ಉಡಾವಣೆ ಮಾಡಿದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾಪಡೆಗಳು ಉಕ್ರೇನಿನ ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಏಕಾಏಕಿ 100 ಕ್ಷಿಪಣಿಗಳನ್ನು ಉಡಾಯಿಸಿವೆ.
ಇದರಿಂದ ಉಕ್ರೇನಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ಅಕ್ಟೋಬರ್ 10 ರಂದು ನಡೆಸಿದ ದಾಳಿಗಿಂತಲೂ ಮಾರಕವಾಗಿದೆ ಎಂದು ಉಕ್ರೇನಿಯನ್ ವಾಯುಪಡೆಯ ವಕ್ತಾರ ಯೂರಿ ಇಗ್ನಾಟ್ ತಿಳಿಸಿದ್ದಾರೆ. ರಷ್ಯಾ ಪಡೆಗಳು ಉಕ್ರೇನಿನ ನಿರ್ಣಾಯಕ ಮೂಲ ಸೌರ್ಯಕಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!