ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ ರಷ್ಯಕ್ಕೆ ವಿಮಾನ ಬಾಡಿಗೆ ಕೊಟ್ಟವರು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯುದ್ಧ ಮತ್ತು ದೇಶಗಳ ನಡುವಿನ ಬಿಕ್ಕಟ್ಟು ಏನೆಲ್ಲ ತೊಂದರೆಗಳನ್ನು ಒಡ್ಡುತ್ತದೆ ನೋಡಿ. ರಷ್ಯ ವಿಮಾನಯಾನಸೇವೆಗಳಿಗೆ ವಿಮಾನಗಳನ್ನು ಲೀಸ್ ಆಧಾರದಲ್ಲಿ ನೀಡಿದ್ದ ಆ ದೇಶದ ಹೊರಗಿನ ಕಂಪನಿಗಳು ಈಗ ತಮ್ಮ ಸ್ವತ್ತನ್ನೇ ಕಳೆದುಕೊಳ್ಳುವ ಭೀತಿಯಲ್ಲಿವೆ.

ಅಮೆರಿಕ ಪ್ರಣೀತ ಆರ್ಥಿಕ ನಿರ್ಬಂಧಗಳ ಕಾರಣದಿಂದ ಈ ಕಂಪನಿಗಳಿಗೆ ರಷ್ಯದಲ್ಲಿ ತಮ್ಮ ಉಪಸ್ಥಿತಿ ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ದೂರದಲ್ಲಿದ್ದೇ ಹಣದ ವ್ಯವಹಾರ ನಡೆಸುವುದಕ್ಕೆ ರಷ್ಯದ ವಿರುದ್ಧ ಪಾಶ್ಚಾತ್ಯರು ಹೇರಿರುವ ಹಣಕಾಸು ನಿರ್ಬಂಧ ಅಡ್ಡಬಂದಿದೆ. ಇದೀಗ ರಷ್ಯದ ಅಧ್ಯಕ್ಷರು ತಮ್ಮನ್ನು ತೊರೆದುಹೋದ ಕಂಪನಿಗಳ ಏನೆಲ್ಲ ಆಸ್ತಿ ರಷ್ಯದಲ್ಲಿದೆಯೋ ಅದನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವ ಮಾತನಾಡುತ್ತಿದ್ದಾರೆ. ಹೀಗಾಗಿ ಈ ಕಂಪನಿಗಳು ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಭಯದಲ್ಲಿವೆ.

ರಷ್ಯ ವಿಮಾನಯಾನ ಸೇವೆಯಲ್ಲಿ ಬೇರೆ ದೇಶದ ಕಂಪನಿಗಳು ಲೀಸಿಗೆ ನೀಡಿರುವ 153 ವಿಮಾನಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!