ರಷ್ಯದಿಂದ ಕಡಿತವಾಗುತ್ತಿರುವ ಎಲ್ ಎನ್ ಜಿಯನ್ನು ಆಫ್ರಿಕಾದಿಂದ ತರಲು ತವಕಿಸುತ್ತಿದೆ ಭಾರತ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯದಿಂದ ಭಾರತವು ಕಡಿಮೆ ಬೆಲೆಗೆ ಕಚ್ಚಾತೈಲ ಪಡೆಯುತ್ತಿದೆ ಎಂಬುದರ ಹಿಂದೆ-ಮುಂದೆಯೇ ಚರ್ಚೆಗಳು ಇರುವಾಗ, ಇದೇ ರಷ್ಯದಿಂದ ಭಾರತ ಎದುರಿಸುತ್ತಿರುವ ಇನ್ನೊಂದು ಕೊರತೆ ಮಾತ್ರ ಅಷ್ಟಾಗಿ ಸುದ್ದಿ ಮಾಡಿಲ್ಲ. ಅದೇನೆಂದರೆ ದ್ರವೀಕೃತ ನೈಸರ್ಗಿಕ ಇಂಧನ, ಎಲ್ ಎನ್ ಜಿ.

ಭಾರತವು ರಷ್ಯದ ದೈತ್ಯ ಇಂಧನ ಕಂಪನಿ ಗ್ಯಾಜ್ಪ್ರೋಮ್ ಜತೆ ಎಲ್ ಎನ್ ಜಿ ಪೂರೈಕೆಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡಿತ್ತು. ಸಿಂಗಾಪುರದ ಕಂಪನಿಯೊಂದರ ಮೂಲಕ ಭಾರತ ಸರ್ಕಾರದ ಅಧೀನದ ಗೈಲ್ ಗೆ ಎಲ್ ಎನ್ ಜಿ ಪೂರೈಕೆಯ ವ್ಯವಸ್ಥೆ ಇತ್ತು. ಆದರೆ ಸಂಘರ್ಷದ ನಂತರದಲ್ಲಿ ರಷ್ಯದ ಕಂಪನಿ ಮೇಲೆ ಹೇರಲಾದ ಪಾಶ್ಚಾತ್ಯ ನಿರ್ಬಂಧಗಳ ಕಾರಣದಿಂದ ಗ್ಯಾಜ್ಪ್ರೋಮ್ ಒಪ್ಪಿಕೊಂಡಷ್ಟುಮಟ್ಟದ ಎಲ್ ಎನ್ ಜಿ ಪೂರೈಸುತ್ತಿಲ್ಲ.

ಈ ದ್ರವೀಕೃತ ನೈಸರ್ಗಿಕ ಇಂಧನವು ಅಡುಗೆ ಇಂಧನವಾಗುವುದರ ಜತೆಗೆ ಪೆಟ್ರೊಕೆಮಿಕಲ್, ಪ್ಲಾಸ್ಟಿಕ್ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಇದರ ಉಪಯೋಗವಿದೆ.

ಇದೀಗ, ಭಾರತವು ಆಫ್ರಿಕಾದ ಎಲ್ ಎನ್ ಜಿ ಸಂಪನ್ನ ದೇಶಗಳಾದ ಅಂಗೋಲ, ಅಲ್ಜೀರಿಯಾಗಳ ಜತೆ ಎಲ್ ಎನ್ ಜಿ ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನದಲ್ಲಿರುವುದಾಗಿ ವರದಿಗಳು ಹೇಳುತ್ತಿವೆ. ಆದರೆ, ಸಂಘರ್ಷದ ನಂತರ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯಿಂದ ಬೆಲೆ ಏರಿಕೆಗಳು ತೀವ್ರವಾಗಿರುವ ಹೊತ್ತಿನಲ್ಲಿ ದೀರ್ಘಾವಧಿ ಒಪ್ಪಂದಗಳಿಗೆ ಯಾವುದೇ ರಾಷ್ಟ್ರಗಳು ಒಪ್ಪುತ್ತಿಲ್ಲ ಎಂಬುದು ಭಾರತವು ಸದ್ಯಕ್ಕೆ ಎದುರಿಸುತ್ತಿರುವ ತಲೆನೋವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!