ರಷ್ಯಾದ ಮೊಸ್ಕ್ವಾ ಯುದ್ದನೌಕೆ ದುರಂತ: ಒಬ್ಬ ಸೈನಿಕ ಸಾವು, 27 ಜನರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಳೆದ ವಾರ ರಷ್ಯಾದ ಕ್ಷಿಪಣಿ ಕ್ರೂಸರ್ ನೌಕೆ ʼಮೊಸ್ಕ್ವಾʼದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಒರ್ವ ಸೈನಿಕ ಮೃತಪಟ್ಟು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ ಘಟನೆ ನಡೆಯುತ್ತಿದ್ದಂತೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನುನಡೆಸಿದ್ದು ನೌಕೆಯಿಂದ 396 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗು ಮುಳುಗಿದ ಒಂದು ವಾರದ ನಂತರ ರಷ್ಯಾ ರಕ್ಷಣಾ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ನೌಕೆಯಲ್ಲಿ 500 ಜನರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳ ಬಗ್ಗೆ ಸಚಿವಾಲಯವು ಯಾವುದೇ ವಿವರಣೆಯನ್ನು ನೀಡಿಲ್ಲ.
ಮೋಸ್ವಾ ಕ್ರೂಸರ್ ಅನ್ನು ತಾನು ಕ್ಷಿಪಣಿ ದಾಳಿ ನಡೆಸಿ ಹೊಡೆದುರುಳಿಸಿರುವುದಾಗಿ ಉಕ್ರೇನ್‌ ಹೇಳಿಕೊಂಡಿದೆ. ಆದರೆ ಅಚ್ಚರಿಯೆಂದರೆ ರಷ್ಯಾ ನೌಕೆ ಯಾವ ಕಾರಣಗಳಿಗೆ ಮುಳುಗಿದೆ ಎಂಬುದರ ಕುರಿತಾಗಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!