ಉಕ್ರೇನ್‌ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟವರು ನಮ್ಮಲ್ಲಿಗೆ ಬನ್ನಿ: ಭಾರತೀಯರಿಗೆ ಆಫರ್‌ ನೀಡಿದ ರಷ್ಯಾ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುಮಾರು ಒಂಬತ್ತು ತಿಂಗಳ ಹಿಂದೆ ಪ್ರಾರಂಭವಾದ ಯುದ್ಧದ ಕಾರಣದಿಂದ ಉಕ್ರೇನ್‌ ತೊರೆದ ಭಾರತೀಯ ವಿದ್ಯಾರ್ಥಿಗಳು ತಮ್ಮ ಉಳಿದ ವೈದ್ಯಕೀಯ ಶಿಕ್ಷಣವನ್ನು ರಷ್ಯಾದಲ್ಲಿ ಮುಂದುವರಿಸುವಂತೆ ರಷ್ಯಾ ಕರೆನೀಡಿದೆ.
ಯುದ್ಧದ ಕಾರಣದಿಂದ ಉಕ್ರೇನ್‌ ತೊರೆದ ಭಾರತೀಯ ವಿದ್ಯಾರ್ಥಿಗಳು ಬಯಸಿದಲ್ಲಿ ರಷ್ಯಾದಲ್ಲಿ ತಮ್ಮ ಉಳಿದ ಶಿಕ್ಷಣವನ್ನು ಮುಂದುವರಿಸಬಹುದು ಎಂದು ರಷ್ಯಾ ಹೇಳಿದೆ.
” ಎರಡೂ ದೇಶಗಳಲ್ಲಿನ ವೈದ್ಯಕೀಯ ಪಠ್ಯಕ್ರಮವು ಬಹುತೇಕ ಒಂದೇ ಆಗಿರುತ್ತದೆ.. ಉಕ್ರೇನ್‌ನಲ್ಲಿ ಹೆಚ್ಚಿನವರು ರಷ್ಯನ್ ಭಾಷೆಯನ್ನು ಮಾತನಾಡುತ್ತಾರೆ. ಅಲ್ಲಿ ರಷ್ಯಾದ ಭಾಷೆ ಪ್ರಾಮುಖ್ಯತೆ ಪಡೆದಿದೆ. ರಷ್ಯಾದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದು ಭಾರತೀಯ ವಿದ್ಯಾರ್ಥಿ ಗಳಿಗೆ ಸಮಸ್ಯೆ ಆಗಲಾರದು ಎಂದು ರಷ್ಯಾ ರಾಯಭಾರಿ ಒಲೆಗ್ ಅವ್ದೀವ್ ಹೇಳಿದ್ದಾರೆ.
ಫೆಬ್ರವರಿ 24 ರಂದು ರಷ್ಯಾ ತನ್ನ ನೆರೆಹೊರೆಯವರ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಿದ್ದರಿಂದ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡರು. ಇದರ ನಂತರ, ರಷ್ಯಾದ ಆಕ್ರಮಣದ ನಡುವೆ ಉಕ್ರೇನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ‘ಆಪರೇಷನ್ ಗಂಗಾ’ ನಡೆಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!