ಉಕ್ರೇನಿನ ಮೇಲೆ ಕ್ಷಿಪಣಿಗಳ ಮಳೆಗರೆದ ರಷ್ಯಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಷ್ಯಾ ಉಕ್ರೇನ್‌ ನಡುವಿನ ಯುದ್ಧ 11ನೇ ತಿಂಗಳಿಗೆ ಮುಂದುವರೆದಿದ್ದು ಕೆಲ ದಿನಗಳ ಹಿಂದಷ್ಟೇ ಡ್ರೋನ್‌ ದಾಳಿಯ ಮೂಲಕ ಉಕ್ರೇನಿನ ಪ್ರಮುಖ ನಗರದ ವಿದ್ಯುತ್‌ ಸರಬರಾಜು ಕಡಿತ ಗೊಳಿಸಿದ್ದ ರಷ್ಯಾವು ಇದೀಗ ಮತ್ತೊಮ್ಮ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾವು ಶುಕ್ರವಾರ ಉಕ್ರೇನ್‌ನ ಮೇಲೆ 70 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದ್ದು ಇದು ಯುದ್ಧ ಪ್ರಾರಂಭವಾದಾಗಿನಿಂದ ನಡೆದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಕ್ಷಿಪಣಿ ದಾಳಿಗಳ ಮೂಲ ರಷ್ಯಾವು ಉಕ್ರೇನಿನ ಎರಡನೇ ಅತಿದೊಡ್ಡ ನಗರ ಕೀವ್‌ ನ ಬಹುತೇಕ ವಿದ್ಯುತ್‌ ಸರಬರಾಜನ್ನು ಕಡಿತಗೊಳಿಸಿ ಅಂಧಕಾರದಲ್ಲಿ ಮುಳುಗಿಸಿದೆ. ಚಳಿಗಾಲ ಎದುರಿಸುತ್ತಿರುವ ಉಕ್ರೇನಿಗೆ ಈ ದಾಳಿಯು ಬಹಳ ನಷ್ಟವನ್ನುಂಟು ಮಾಡಿದ್ದು ಲಕ್ಷಾಂತರ ನಾಗರಿಕರು ಚಳಿಯಿಂದ ರಕ್ಷಿಸಕೊಳ್ಳಲಾಗದೇ ಪರದಾಡುತ್ತಿದ್ದಾರೆ.

ಸೆಂಟ್ರಲ್ ಕ್ರಿವಿ ರಿಹ್‌ನಲ್ಲಿ ಅಪಾರ್ಟ್‌ಮೆಂಟ್ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಸಾವನ್ನಪ್ಪಿದರು ಮತ್ತು ದಕ್ಷಿಣದ ಖರ್ಸನ್‌ನಲ್ಲಿ ಶೆಲ್ ದಾಳಿಯಲ್ಲಿ ಇನ್ನೊಬ್ಬರು ಸಾವನ್ನಪ್ಪಿದರು ಎಂದು ಉಕ್ರೇನ್‌ ಹೇಳಿದೆ. ಸಂಜೆಯ ವೀಡಿಯೊ ಭಾಷಣದಲ್ಲಿ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಇನ್ನೂ ಹಲವಾರು ಬೃಹತ್ ದಾಳಿಗಳಿಗೆ ಸಾಕಷ್ಟು ಕ್ಷಿಪಣಿಗಳನ್ನು ಹೊಂದಿದೆ ಎಂದು ಹೇಳಿದ್ದು ಉಕ್ರೇನಿಗೆ ಇನ್ನೂ ಹೆಚ್ಚಿನ ಪೂರಕ ವ್ಯವಸ್ಥೆ ಹಾಗು ಉತ್ತಮವಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸಲು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸ್ಥಳೀಯ ಅಧಿಕಾರಿಗಳು ರಾಜಧಾನಿ ಕೈವ್, ದಕ್ಷಿಣ ಕ್ರಿವಿ ರಿಹ್ ಮತ್ತು ಈಶಾನ್ಯ ಖಾರ್ಕಿವ್‌ನಲ್ಲಿ ಸ್ಫೋಟಗಳನ್ನು ವರದಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!