ಉಕ್ರೇನ್‌ ಕದನದಲ್ಲಿ ಮೃತಪಟ್ಟ ತನ್ನ ಸೈನಿಕರ ಸಾವಿನ ಸಂಖ್ಯೆ ಕುರಿತು ಅಧಿಕೃತ ಮಾಹಿತಿ ನೀಡಿದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್‌ ವಿರುದ್ಧದ ಸೇನಾಸಮರದಲ್ಲಿ 1,351 ರಷ್ಯಾ ಸೈನಿಕರು ಮರಣವನ್ನಪ್ಪಿದ್ದಾರೆ ಎಂದು ರಷ್ಯಾ ಸೇನಾಪಡೆಯು ಅಧಿಕೃತ ಮಾಹಿತಿ ನೀಡಿದೆ.
ಮಿಲಿಟರಿ ಕಾರ್ಯಾಚರಣೆಯಲ್ಲಿ ತಮ್ಮ ಕಡೆಯ 3825 ಯೋಧರು ಗಾಯಗೊಂಡಿದ್ದಾರೆ ಎಂದು ರಷ್ಯಾ ಸೇನಾಪಡೆಯಗಳ ಉಪಮುಖ್ಯಸ್ಥ ಜನರಲ್‌ ಸೆರ್ಗಾಯ್‌ ರುಡ್‌ ಸ್ಕೋಯ್‌ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ ಕದನದಲ್ಲಿ ರಷ್ಯಾದ 700 ದಿಂದ 15ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಬುಧವಾರ ಹೇಳಿಕೆ ನೀಡಿತ್ತು. ಈ ಬೆನ್ನಲ್ಲೇ ರಷ್ಯಾ ಮೃತಪಟ್ಟ ಸೈನಿಕರ ಬಗೆಗಿನ ಮಾಹಿತಿ ನೀಡಿದೆ. ಉಕ್ರೇನ್‌ ಅಧಕಾರಿಗಳ ಮಾಹಿತಿ ಮತ್ತು ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಆಧರಿಸಿ ನ್ಯಾಟೋ ಮೃತ ರಷ್ಯಾ ಸೈನಿಕರ ಸಂಖ್ಯೆಯನ್ನು ಅಂದಾಜಿಸಿತ್ತು. ರಷ್ಯಾ ನಿರೀಕ್ಷಿಸಿದ್ದಕ್ಕಿಂತೂ ಅತ್ಯಂತ ಪ್ರಬಲ ಪ್ರತಿರೋಧವನ್ನು ಉಕ್ರೇನ್‌ ನ ಯೋಧರು ತೋರಿದ್ದರಿಂದ ಭಾರೀ ಸಂಖ್ಯೆಯ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!