Tuesday, August 16, 2022

Latest Posts

ರಷ್ಯಾದಿಂದ ತಜಿಕಿಸ್ತಾನಕ್ಕೆ 12 ಶಸ್ತ್ರಾಸ್ತ್ರ ವಾಹನ: ಗಡಿ ರಕ್ಷಣೆಗೆ ಸಜ್ಜು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಜಿಕಿಸ್ತಾನಕ್ಕೆ ರಷ್ಯಾ ತನ್ನ 12 ಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾ ಉಪಕರಣಗಳನ್ನು ಕಳುಹಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ತಜಿಕಿಸ್ತಾನದಲ್ಲಿರುವ ತನ್ನ ವಾಯುನೆಲೆಯಲ್ಲಿ ರಷ್ಯಾ ಸೇನಾ ಕಸರತ್ತು ನಡೆಸುತ್ತಿದ್ದು, ಮಿಲಿಟರಿ ನೆಲೆಯಲ್ಲಿ ಹಾರ್ಡ್ ವೇರ್ ಅನ್ನು ವಿಸ್ತರಿಸಿದೆ. ಅಫ್ಘಾನಿಸ್ಥಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಧ್ಯ ಏಷ್ಯಾವನ್ನು ಇಸ್ಲಾಮಿಕ್ ಉಗ್ರರು ಒಳನುಸುಳುವ ಬಗ್ಗೆ ರಷ್ಯಾ ಆತಂಕ ವ್ಯಕ್ತಪಡಿಸಿದೆ.
ತಜಿಕಿಸ್ತಾನದ ಗಡಿಯಲ್ಲಿ ಉಂಟಾಗಿರುವ ಅಸ್ಥಿರತೆಯ ಹಿನ್ನೆಲೆ ನಮ್ಮ ಭದ್ರತೆ ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss