ಉಕ್ರೇನ್‌- ರಷ್ಯಾ ಮಾತುಕತೆ ಫಲಪ್ರದ; ಕೀವ್‌ ನಲ್ಲಿ ಸೇನಾ ಚಟುವಟಿಕೆ ಕಡಿಮೆಗೊಳಿಸಲು ಒಪ್ಪಿದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನ ಮಾತುಕತೆ ಫಲಪ್ರದವಾಗಿದ್ದು, ಉಕ್ರೇನ್‌ ರಾಜಧಾನಿ ಕೀವ್ ಮತ್ತು ಉತ್ತರ ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆ ಮಾಡುವುದಾಗಿ ರಷ್ಯಾವನ್ನು ಪ್ರತಿನಿಧಿಸಿದ್ದ ಸಂಧಾನಕಾರರು ಹೇಳಿದ್ದಾರೆ.
ಟರ್ಕಿಯ ಇಸ್ತಾನ್ ಬುಲ್ ನಲ್ಲಿ ಮಂಗಳವಾರ ಉಭಯ ರಾಷ್ಟ್ರಗಳ ಸಂಧಾನಕಾರರು ಮಾತುಕತೆ ನಡೆಸಿದರು. ಆದರೆ ಇದು ಕದನ ವಿರಾಮ ಘೋಷಣೆಯಲ್ಲ, ಸಂಘರ್ಷ ಪೀಡಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವ ಮೂಲಕ ಮಿಲಿಟರಿ ಕಾರ್ಯಾಚರಣೆಯ ತೀವ್ರತೆಯನ್ನು ಕಡಿಮೆ ಮಾಡುವ ಭರವಸೆ ಎಂದು ರಷ್ಯಾದ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಟಾಸ್ ಸುದ್ದಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸಂಘರ್ಷವನ್ನು ಪರಿಹರಿಸಲು ನಡೆಸಿದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇಂದಿನ ಸಭೆಯ ಫಲಿತಾಂಶಗಳು ಉಕ್ರೇನ್‌- ರಷ್ಯಾ ಅಧ್ಯಕ್ಷರ ಸಂಭವನೀಯ ಮಾತುಕತೆಗೆ ಮುನ್ನುಡಿಯಾಗಲಿವೆ ಎಂದು ಉಕ್ರೇನ್ ಸಮಾಲೋಚಕ ಡೇವಿಡ್ ಅರಾಖಮಿಯಾ ಅಭಿಪ್ರಾಯಪಟ್ಟಿದ್ದಾರೆ.
ಸಂಘರ್ಷ ಪೀಡಿತ ಉಕ್ರೇನ್ ನೆಲದಲ್ಲಿ ಮಾನವೀಯ ಪರಿಸ್ಥಿತಿ ಸುಧಾರಿಸಲು ರಷ್ಯಾ ಅವಕಾಶ ನೀಡಬೇಕು ಮತ್ತು ರಷ್ಯಾ ಒತ್ತಾಯಿಸುತ್ತಿರುವ ವಿಚಾರಗಳ ಕುರಿತಾಗಿ ಉಕ್ರೇನ್ ಒಪ್ಪಿಗೆ ಸೂಚಿಸುವ ವಿಷಯಗಳನ್ನು ಕೇಂದ್ರೀಕರಿಸಿ ಸಭೆ ಆಯೋಜನೆಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!