ಬಿಡೆನ್‌ – ಜಿನ್‌ಪಿಂಗ್ ಇಂದು ಮಾತುಕತೆ; ರಷ್ಯಾ ವಿಷಯದಲ್ಲಿ ಚೀನಾ ಮೇಲೆ ಒತ್ತಡ ಹೇರುತ್ತಾ ಅಮೆರಿಕ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಶುಕ್ರವಾರ ಸಂಜೆ ದೂರವಾಣಿ ಮೂಲಕ ಮಾತುಕತೆ ನಡೆಸಲಿದ್ದಾರೆ ಎಂದು ಎಂದು ಶ್ವೇತಭವನ ತಿಳಿಸಿದೆ.
ಉಕ್ರೇನ್‌ನಲ್ಲಿ ಪ್ರಸ್ತುತ ಏರ್ಪಟ್ಟಿರುವ ಬಿಕ್ಕಟ್ಟು, ರಷ್ಯಾದ ಆಕ್ರಮಣ, ಯುದ್ಧದ ಬಗ್ಗೆ ಪರಸ್ಪರರ ನಿಲುವುಗಳು ಇತ್ಯಾದಿ ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ನಡೆಸಲಿದ್ದಾರೆ.
ಉಕ್ರೇನ್‌ನ ಆಕ್ರಮಣದ ಬಗ್ಗೆ ತನ್ನ ನಿಕಟ ಮಿತ್ರ ರಷ್ಯಾ ಬೆಂಬಲಕ್ಕೆ ನಿಂತರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕವು ಇತ್ತೀಚೆಗೆ ಚೀನಾಕ್ಕೆ ಎಚ್ಚರಿಕೆ ನೀಡಿತ್ತು. ಇಂದೂ ಸಹ ಅದೇ ವಿಚಾರ ಚರ್ಚೆಯಾಗುವ ಸಂಭವಗಳಿವೆ ಎನ್ನಲಾಗಿದೆ.
ಉಕ್ರೇನ್‌ ಮೇಲೆ ರಷ್ಯಾ ಅಧ್ಯಕ್ಷ ಪುಟಿನ್‌ ಯುದ್ಧ ಘೋಷಿಸುವ ಕ್ರಮಗಳನ್ನು ಖಂಡಿಸಲು ಚೀನಾ ನಿರಾಕರಿಸಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಚೀನಾ ರಷ್ಯಾಕ್ಕೆ ಬೆಂಬಲವಾಗಿ ನಿಂತಿದೆ. ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿರುವ ಕಠಿಣ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾ ಚೀನಾದ ಸಹಕಾರವನ್ನು ಅಪೇಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ- ಚೀನಾ ಅಧ್ಯಕ್ಷರ ಮಾತುಕತೆ ಮಹತ್ವ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!