400 ಇರಾನ್ ಡ್ರೋನ್‌ಗಳಿಂದ ರಷ್ಯಾ ದಾಳಿ: ಆತಂಕ ವ್ಯಕ್ತಪಡಿಸಿದ ಝಲೆನ್ಸ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್‌ಗೆ ಸೇರಿದ 400 ಡ್ರೋನ್‌ಗಳನ್ನು ಬಳಸಿ ರಷ್ಯಾ ತನ್ನ ದೇಶದ ಮೇಲೆ ದಾಳಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ‘ಶೇಡೆಡ್-136’ ಕಾಮಿಕೇಜ್ ಡ್ರೋನ್‌ಗಳನ್ನು ಬಳಸಿ ರಷ್ಯಾ ತನ್ನ ನಾಗರಿಕರ ಮೇಲೆ ದಾಳಿ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ತಿಂಗಳ 17ರಂದು ಏಕಕಾಲಕ್ಕೆ 43 ಡ್ರೋನ್ ಗಳಿಂದ ಉಗ್ರ ದಾಳಿ ನಡೆಸಲಾಗಿತ್ತು. ನಂತರ, 28 ಡ್ರೋನ್‌ಗಳೊಂದಿಗೆ ಕೀವ್ ಮೇಲೆ ದಾಳಿ ನಡೆಸಿದ್ದರಿಂದ ಇರಾನ್ ನ ವರ್ತನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ.

ಇರಾನ್‌ನ ಡ್ರೋನ್‌ಗಳ ಮೂಲಕ ರಷ್ಯಾ ಉಕ್ರೇನ್‌ನಲ್ಲಿ ಜನರ ಮನೆಗಳ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ಅಮೆರಿಕ ಕೂಡ ಪ್ರತಿಕ್ರಿಯಿಸಿದೆ. ಇರಾನ್ ಕಳುಹಿಸಿದ ಡ್ರೋನ್‌ಗಳಿಂದ ಉಕ್ರೇನ್‌ನಲ್ಲಿ ನಾಗರಿಕರನ್ನು ಕೊಲ್ಲಲಾಗುತ್ತಿದ್ದು, ಇರಾನ್ ಡ್ರೋನ್‌ಗಳನ್ನು ಪೂರೈಸಬಾರದು ಎಂದು ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರ್ ಹೇಳಿದ್ದಾರೆ.

ಇರಾನ್ ಮತ್ತು ರಷ್ಯಾದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇರಾನ್‌ಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ. ಇರಾನ್ ರಷ್ಯಾಕ್ಕೆ ಶಸ್ತ್ರಾಸ್ತ್ರ ರಫ್ತು ಮಾಡುವುದನ್ನು‌ ತಕ್ಷಣ ನಿಲ್ಲಿಸಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!