ಯುದ್ಧದ 20ನೇ ದಿನ, ರಷ್ಯ ಎಲ್ಲಿಯವರೆಗೆ ಉಕ್ರೇನನ್ನು ನುಗ್ಗಿದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯ-ಉಕ್ರೇನ್ ಯುದ್ಧದಲ್ಲಿ ಎರಡೂ ಕಡೆಯವರೂ ಮಾಹಿತಿ ಭಿತ್ತರವನ್ನೂ ಶಸ್ತ್ರವಾಗಿಸಿಕೊಂಡಿರುವುದರಿಂದ ನಿಖರತೆ ಕಷ್ಟ. ಉದಾಹರಣೆಗೆ, ಉಕ್ರೇನ್ ತಾನು ಎರಡೂವರೆ ಸಾವಿರಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಹೇಳುತ್ತದೆ. ಆದರೆ ರಷ್ಯ ಐದುನೂರು ಚಿಲ್ಲರೆ ಸೈನಿಕರು ಮೃತರಾಗಿರುವುದಾಗಿ ಹೇಳುತ್ತದೆ.

ಹತ್ತಿರ ಹತ್ತಿರ ಐದು ಸಾವಿರದಷ್ಟು ನಾಗರಿಕರು ಸತ್ತಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡರೆ, ಪಾಶ್ಚಾತ್ಯ ರಾಷ್ಟ್ರಗಳೇ ನೀಡುತ್ತಿರುವ ಅಂಕಿ ಒಂಬೈನೂರನ್ನು ದಾಟುತ್ತಿಲ್ಲ.

ಇವೆಲ್ಲದರ ನಡುವೆ, ಜಗತ್ತಿನ ಶಕ್ತಿಶಾಲಿ ಮಿಲಿಟರಿ ಬಲದಲ್ಲೊಂದಾದ ರಷ್ಯಾಕ್ಕೆ ಅಂದುಕೊಂಡ ವೇಗದಲ್ಲಿ ಉಕ್ರೇನಿನಲ್ಲಿ ನುಗ್ಗಲಾಗುತ್ತಿಲ್ಲ ಎಂಬುದಂತೂ ನಿಜವೇ. ಏಕೆಂದರೆ ಒಮ್ಮೆ ಯಾವುದೇ ನಗರ ಖಚಿತವಾಗಿ ವಶವಾದ ಮೇಲೆ ಆ ಕುರಿತ ಮಾಹಿತಿಯನ್ನು ಮುಚ್ಚಿಡುವುದು ಕಷ್ಟ. ಹೀಗಾಗಿ ರಷ್ಯ ಯಾವುದನ್ನೆಲ್ಲ ವಶಪಡಿಸಿಕೊಂಡಿದೆ ಹಾಗೂ ಎಲ್ಲೆಲ್ಲ ನುಗ್ಗುತ್ತಿದೆ ಎಂಬುದರ ಚಿತ್ರಣ ಪಾಶ್ಚಾತ್ಯ ಮಾಧ್ಯಮದಲ್ಲಿ ತೆರೆದುಕೊಳ್ಳುತ್ತಿರುವುದನ್ನು ನಂಬಬಹುದು.

ರಾಜಧಾನಿ ಕೀವ್ ಗೆ ಹತ್ತಿರದಲ್ಲಿರುವ ರಷ್ಯನ್ ಪಡೆಗಳು ಪಶ್ಚಿಮ ಹೊರತುಪಡಿಸಿ ಮತ್ತೆ ಮೂರು ದಿಕ್ಕುಗಳಿಂದ ಹೀಗೆಲ್ಲ ನುಗ್ಗಿದ್ದಾರೆ ಎಂದು ಬಿಬಿಸಿ ಈ ಮಾಹಿತಿ ಚಿತ್ರ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!