ಭಾರತದವರಲ್ಲಿ ಕ್ಷಮೆ ಕೋರಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಷ್ಯಾ (Russia) ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ (Sergey Lavrov) ಗುರುವಾರ ಭಾರತದವರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಪಾಶ್ಚಾತ್ಯ ರಾಯಭಾರಿಗಳ ನಿಯೋಗಗಳ ಅಸಮರ್ಪಕವಲ್ಲದ ನಡವಳಿಕೆಗಳಿಗಾಗಿ ಭಾರತದ ಕ್ಷಮೆ ಯಾಚಿಸುತ್ತೇನೆ ಎಂದು ಲಾವ್ರೊವ್ ಹೇಳಿದರು.

ಜಿ20 (G20 Meet) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಬಳಿಕ ಮಾತನಾಡಿದ ಅವರು, ಪಾಶ್ಚಿಮಾತ್ಯ ದೇಶಗಳ ನಿಯೋಗಗಳು ಜಿ20 ಕಾರ್ಯಸೂಚಿಯನ್ನು ಒಂದು ಪ್ರಹಸನವನ್ನಾಗಿ ಪರಿವರ್ತಿಸಿ ಅಸಭ್ಯ ನಡವಳಿಕೆ ಪ್ರದರ್ಶಿಸಿದರು. ಇದಕ್ಕಾಗಿ ಭಾರತದ ಮತ್ತು ದಕ್ಷಿಣದ ದೇಶಗಳ ಪ್ರತಿನಿಧಿಗಳ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.

ಜಿ20 ಸಭೆಯಲ್ಲಿ ವಿವಿಧ ವಿದೇಶಾಂಗ ಸಚಿವರು ಪ್ರಮುಖ ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸಿದರು. ಅಮೆರಿಕ, ಪಾಶ್ಚಾತ್ಯ ದೇಶಗಳು ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಬಿರುಕು, ಉಕ್ರೇನ್​ ಯುದ್ಧಕ್ಕೆ ಸಂಬಂಧಿಸಿ ರಷ್ಯಾ-ಚೀನಾ ಮೈತ್ರಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿದೇಶಾಂಹಗ ಸಚಿವ ಎಸ್. ಜೈಶಂಕರ್, ಅಮೆರಿಕದ ಆಂಟನಿ ಬ್ಲಿಂಕನ್, ಸೆರ್ಗೆ ಲಾವ್ರೊವ್, ಚೀನಾದ ಕ್ವಿನ್ ಗಾಂಗ್, ಬ್ರಿಟನ್​​ನ ಜೇಮ್ಸ್ ಕ್ಲೆವೆರ್ಲಿ ಹಾಗೂ ಯುರೋಪಿಯನ್ ಒಕ್ಕೂಟದ ವಿದೇಶಾಂಗ ಸಚಿವರ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಸಭೆಯಲ್ಲಿ ಭಾಗಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!