ಕದನ ಭೂಮಿಯಲ್ಲಿ ಅರಳಿದ ಪ್ರೀತಿ: ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ರಷ್ಯನ್‌ ಯುವಕ- ಉಕ್ರೇನ್‌ ಹುಡುಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ರಷ್ಯಾ ಮತ್ತು ಉಕ್ರೇನ್ ದೇಶಗಳು ಕಳೆದ ಐದು ತಿಂಗಳಿನಿಂದ ಸುದೀರ್ಘ ಯುದ್ಧದಲ್ಲಿ ತೊಡಗಿವೆ. ರಷ್ಯಾ- ಉಕ್ರೇನಿಯನ್ನರ ನಡುವೆ ಪರಸ್ಪರ ದ್ವೇಷ ಹೊಗೆಯಾಡುತ್ತದೆ. ಆದರೆ ರಷ್ಯಾದ ಯುವಕ ಹಾಗೂ ಉಕ್ರೇನ್‌ನ ಯುವತಿ ಭಾರತದಲ್ಲಿ ವಿವಾಹವಾಗುವ ಮೂಲಕ ‘ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದ ದಿವ್ಯ ಆಶ್ರಮದಲ್ಲಿ ಮಂಗಳವಾರ ಸನಾತನ ಹಿಂದೂ ಸಂಪ್ರದಾಯಂತೆ ನಡೆದ ವಿವಾಹ ಸಮಾರಂಭದಲ್ಲಿ ರಷ್ಯಾದ ಯುವಕ ಸೆರ್ಗೆಯ್ ನೊವಿಕೋವ್ ಅವರು ತಮ್ಮ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಈ ಜೋಡಿ ಭಾರತ ಸಂಪ್ರದಾಯಿಕ ಉಡುಗೆ ತೊಟ್ಟು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಸೆರ್ಗೆಯ್ ಹಾಗೂ ಎಲೋನಾ ಗೆ ಯುದ್ಧದ ಕಾರಣದಿಂದ ತಾಯ್ನಾಡಿಗೆ ತೆರಳಲು ಸಾಧ್ಯವಾಗಿಲ್ಲ. ಯುವಜೋಡಿ ಹಿಂದೂ ಸಂಪ್ರದಾಯದ ಕುರಿತಾಗಿ ಅಪಾರ ಶ್ರದ್ಧೆ ಹೊಂದಿರುವುದರಿಂದ ಹಿಂದೂ ವಿಧಿ ವಿಧಾನಗಳಂತೆ ವಿವಾಹವಾಗಲು ನಿರ್ಧರಿಸಿದ್ದಾರೆ.
ಮದುವೆಯಲ್ಲಿ ಸ್ಥಳೀಯರು ಪಾಲ್ಗೊಂಡು ನೂತನ ವಧುವರರಿಗೆ ಆಶೀರ್ವದಿಸಿದ್ದಾರೆ. ಅಲ್ಲಿನ ಪಂಡಿತ್ ವಿನೋದ್ ಶರ್ಮಾ ಮತ್ತು ಅವರ ಕುಟುಂಬದವರು ‘ಕನ್ಯಾದಾನ’ ಸೇರಿದಂತೆ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!